ADVERTISEMENT

UPSC: ಪರೀಕ್ಷೆ ಏಕೆ ಬರೆಯುತ್ತಿದ್ದೀರಿ ಎಂಬ ಸ್ಪಷ್ಟತೆ ಇದ್ದರೆ ಯಶಸ್ಸು; ಸಚಿನ್

​ಪ್ರಜಾವಾಣಿ ವಾರ್ತೆ
Published 9 ಮೇ 2025, 9:56 IST
Last Updated 9 ಮೇ 2025, 9:56 IST

ಕೇಂದ್ರ ಲೋಕಸೇವಾ ಆಯೋಗವು (UPSC) 2024ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ (CSE) ಡಾ. ಸಚಿನ್‌ ಗುತ್ತೂರು (Dr. Sachin Guttur) 41ನೇ ರ‍್ಯಾಂಕ್‌ ಪಡೆದಿದ್ದಾರೆ. ಬಸವರಾಜ ಗುತ್ತೂರು ಮತ್ತು ವಿನೋದಾ ದಂಪತಿಯವರ ಮಗನಾಗಿರುವ ಸಚಿನ್‌ ಮೂಲತಃ ಹಾವೇರಿ (Haveri) ಜಿಲ್ಲೆಯವರು. ಶೈಕ್ಷಣಿಕ ವಿದ್ಯಾಭ್ಯಾಸವೆಲ್ಲ ಪೂರ್ಣಗೊಳಿಸಿದ್ದು ದಾವಣಗೆರೆ (Davanagere) ಜಿಲ್ಲೆಯಲ್ಲಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರಿಗೆ ಯಶಸ್ಸು ಸಿಕ್ಕಿದ್ದು ನಾಲ್ಕನೇ ಪ್ರಯತ್ನದಲ್ಲಿ. ಗುರಿ ಸ್ಪಷ್ಟವಾಗಿದ್ದರೆ ಯಶಸ್ಸು ಸಿಗುತ್ತದೆ ಎಂದು ಹೇಳುವ ಸಚಿನ್‌ ಗುತ್ತೂರು, ಈ ವಿಡಿಯೊದಲ್ಲಿ ಪರೀಕ್ಷಾರ್ಥಿಗಳಿಗೆ ಅನೇಕ ಟಿಪ್ಸ್‌ (Topper’s Tips) ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.