ADVERTISEMENT

ವಕ್ರೀಭವನ ಸೂಚ್ಯಂಕ

ಎಸ್ಸೆಸ್ಸೆಲ್ಸಿ- ಪಿಯುಸಿ ಪರೀಕ್ಷೆ ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 19:30 IST
Last Updated 8 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೌತಶಾಸ್ತ್ರ

ಬೆಳಕಿನ ವಕ್ರೀಭವನದಲ್ಲಿ ಮಾಧ್ಯಮ 1ಕ್ಕೆ ಸಂಬಂಧಿಸಿದಂತೆ ಮಾಧ್ಯಮ 2ರ ಸಾಪೇಕ್ಷ ವಕ್ರೀಭವನದ ಸೂಚ್ಯಂಕ ಎನ್ನುವರು.

ಬೆಳಕಿನ ವೇಗವು ಮಾಧ್ಯಮದ ಸಾಂದ್ರತೆಯ ಮೇಲೆ ಅವಲಂಬಿಸಿದ್ದು, ವಕ್ರೀಭನವು ಎರಡು ಮಾಧ್ಯಮಗಳ ಸಾಂದ್ರತೆಯ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ.

ADVERTISEMENT

ಮಾಧ್ಯಮ 1 (ಗಾಳಿ) ರಲ್ಲಿ ಬೆಳಕಿನ ವೇಗ ಮತ್ತು ಮಾಧ್ಯಮ 2 (ಗಾಜು) ರಲ್ಲಿ ಬೆಳಕಿನ ವೇಗ ಆದಾಗ
ಮಾಧ್ಯಮ 1ಕ್ಕೆ ಸಂಬಂಧಿಸಿದಂತೆ ಮಾಧ್ಯಮ 2 ರ ವಕ್ರೀಭವನ ಸೂಚ್ಯಂಕ

ಅದೇ ರೀತಿ ಮಾಧ್ಯಮ 2ಕ್ಕೆ ಸಂಬಂಧಿಸಿದಂತೆ
ಮಾಧ್ಯಮ 1ರ ವಕ್ರೀಭವನ ಸೂಚ್ಯಂಕ

ಮಾಧ್ಯಮ 1 ನಿರ್ವಾತವಾದಾಗ ವಕ್ರೀಭವನ ಸೂಚ್ಯಂಕವು


ಗೋಳೀಯ ಮಸೂರಗಳು

ಪೀನ ಮಸೂರ

ಈ ಮಸೂರವು ಗೋಳವಾದ ಹೊರಕ್ಕೆ ಬಾಗಿದ ಒಂದು ಅಥವಾ ಎರಡು ಮೇಲ್ಮೈಗಳನ್ನು ಹೊಂದಿದ್ದು ಅಂಚುಗಳಿಗೆ ಹೋಲಿಸಿದಾಗ ಮಧ್ಯದಲ್ಲಿ ದಪ್ಪವಾಗಿರುತ್ತದೆ.

ಪೀನ ಮಸೂರಗಳು ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುತ್ತವೆ. ಮಸೂರದಿಂದ ವಕ್ರೀಭವಿಸಿದ ನಂತರ ಪ್ರಧಾನ ಅಕ್ಷದ ಒಂದು ಬಿಂದುವಿನ ಮೇಲೆ ಕೇಂದ್ರೀಕರಿಸುತ್ತದೆ. ಈ ಬಿಂದುವನ್ನು ಪ್ರಧಾನ ಸಂಗಮ ಎನ್ನುವರು.

ನಿಮ್ನ ಮಸೂರ

ಈ ಮಸೂರವು ಗೋಳದ ಒಳಕ್ಕೆ ಬಾಗಿದ ಒಂದು ಅಥವಾ ಎರಡು ಮೇಲ್ಮೈಗಳನ್ನು ಹೊಂದಿದ್ದು ಮಧ್ಯಕ್ಕೆ ಹೋಲಿಸಿದಾಗ ಅಂಚುಗಳು ದಪ್ಪದಾಗಿರುತ್ತವೆ. ಪೀನ ಮಸೂರಗಳು ಬೆಳಕನ್ನು ಪ್ರಧಾನಾಕ್ಷದಿಂದ ವಿಕೇಂದ್ರಿಕರಿಸುತ್ತವೆ. ಪ್ರಧಾನಾಕ್ಷದ ಮೇಲಿನ ಈ ಬಿಂದುವನ್ನು ಮಸೂರದ ಪ್ರಧಾನ ಸಂಗಮ ಎನ್ನುವರು.

ದೃಕ್ ಕೇಂದ್ರ (0): ಮಸೂರದ ಕೇಂದ್ರ ಬಿಂದುವಾಗಿದೆ. ದೃಕ್ ಕೇಂದ್ರದ ಮೂಲಕ ಹಾದು ಹೋಗುವ ಬೆಳಕಿನ ಕಿರಣಗಳು ಯಾವುದೇ ವಿಚಲನೆಯನ್ನು ಹೊಂದುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.