ನವದೆಹಲಿ: ಆಮ್ ಅದ್ಮಿ ಪಕ್ಷದ ಪೂರ್ವ ದೆಹಲಿಯ ಗಾಂಧಿನಗರಶಾಸಕ ಅನಿಲ್ ವಾಜಪೇಯಿ ಬಿಜೆಪಿಗೆಶುಕ್ರವಾರ ಸೇರ್ಪಡೆಯಾಗಿದ್ದಾರೆ.
ಎರಡು ತಿಂಗಳಲ್ಲಿ ಇಬ್ಬರು ಶಾಸಕರು ಎಎಪಿ ತ್ಯಜಿಸಿದಂತಾಗಿದೆ. ಈ ಮೊದಲು ಶಾಸಕ ಹರಿಂದರ್ ಸಿಂಗ್ ಖಾಲ್ಸಾ ಬಿಜೆಪಿ ಸೇರಿದ್ದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ದೆಹಲಿ ಬಿಜೆಪಿ ಉಸ್ತುವಾರಿ ಶ್ಯಾಮ್ ಜಾಜು ಮತ್ತು ಕೇಂದ್ರ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ಅನಿಲ್ ಬಿಜೆಪಿ ಸೇರಿದರು.
ಬಿಜೆಪಿ ತನ್ನ ಏಳು ಶಾಸಕರಿಗೆ ತಲಾ ₹ 10 ಕೋಟಿ ಆಮಿಷವೊಡ್ಡಿದೆ ಎಂದು ಎಎಪಿ ಆರೋಪಿಸಿದ್ದ ಎರಡು ದಿನದ ತರುವಾಯ ಈ ಬೆಳವಣಿಗೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಗೋಯಲ್ ಅವರು, ‘ಏಳಲ್ಲ ಒಟ್ಟು 14 ಮಂದಿ ಎಎಪಿ ಶಾಸಕರು ನಮ್ಮ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ’ ಎಂದು ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.