ADVERTISEMENT

ಶುಭಗಳಿಗೆಯಲ್ಲಿ ಬಂದಿರುವೆ, ಯಶ ನಮ್ಮದೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 14:23 IST
Last Updated 30 ಮಾರ್ಚ್ 2019, 14:23 IST
   

ಶಿವಮೊಗ್ಗ: ಭದ್ರಾವತಿ ಕ್ಷೇತ್ರದಲ್ಲಿ ಹಿಂದೆ ಏನಾಗಿದೆ ಎಂಬ ಇತಿಹಾಸದ ಹಳೆಯ ಕಥೆ ಬೇಡ.ಯಾವ ಅಡಚಣೆಯೂ ಇಲ್ಲದೆ ಶುಭಗಳಿಗೆಯಲ್ಲಿ ಬಂದಿದ್ದೇನೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಒಂದು ಲಕ್ಷ ಮುನ್ನಡೆ ಪಡೆಯಲಿದ್ದಾರೆ ಎಂದು ಸಚಿವ ಡಿಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಭದ್ರಾವತಿಯಲ್ಲಿ ಅವರು ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು.

ಒಳ್ಳೆ ವ್ಯವಹಾರ ಮಾಡುವಾಗ ಹಾಲಮತದವರನ್ನು ಕರೆಯುತ್ತೇವೆ. ಹಾಗೆಯೇ, ನಾವುಚುನಾವಣೆಯನ್ನು ವಿಶ್ವಾಸ, ನಂಬಿಕೆಯಿಂದ ಮಾಡುತ್ತಿದ್ದೇವೆ.ಶಿವಮೊಗ್ಗದಲ್ಲೂ ಜನ ಹೊಸ ಬದಲಾವಣೆಬಯಸಿದ್ದಾರೆ. ಈ ಬಾರಿ ಭದ್ರಾವತಿಯಲ್ಲಿ ಕಾಂಗ್ರೆಸ್‌ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಣ್ಣ ದೋಷವೂ ಇಲ್ಲದೆ ಚುನಾವಣೆ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಇರಬೇಕು ಎಂದರೆ ಜೆಡಿಎಸ್‌ ಮುಖಂಡರ ಜತೆ ಒಂದೇ ಕಾರಿನಲ್ಲಿ ತೆರಳಿ ಪ್ರಚಾರ ನಡೆಸಬೇಕು. ಇಲ್ಲದಿದ್ದರೆ ಬೇರೆ ಗಾಡಿ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ADVERTISEMENT

ಶಿವಮೊಗ್ಗ ಕ್ಷೇತ್ರ ಮಾತ್ರವಲ್ಲ ಪಕ್ಷ ಬಯಸಿದರೆ ಯಾವ ಕ್ಷೇತ್ರಕ್ಕೆ ಬೇಕಾದರೂ ಹೋಗಿ ಪ್ರಚಾರ ಮಾಡುತ್ತೆನೆ. ಬಿಜೆಪಿಯ ಆಯನೂರು ಮಂಜುನಾಥ್ ಅವರ ಟೀಕೆಗೆ ತಲೆಕೆಡಸಿಕೊಳ್ಳುವುದಿಲ್ಲ. ಅವರು ನಮ್ಮ ಮನೆ ನೋಡಿ ಬಂದಿದ್ದಾರೆ. ಅವರು ಇನ್ನೊಬ್ಬರ ಜತೆಕುಸ್ತಿ ಆಡಿ, ಮೈ–ಕೈ ಗಾಯ ಮಾಡಿಕೊಂಡು ಹೋಗಿದ್ದನ್ನೂ ನೋಡಿದ್ದೇನೆ ಎಂದು ಕುಟುಕಿದರು.

ಕೇವಲ ಶಿವಮೊಗ್ಗ ಮಾತ್ರವಲ್ಲ ಪಕ್ಷ ಬಯಸಿದಲ್ಲಿಗೆ ಪ್ರಚಾರಕ್ಕೆ ಹೋಗುತ್ತೇನೆ. ಹಾಗೆಯೇ ಪಕ್ಷದ ಎಲ್ಲ ಮುಖಂಡರೂ ಮೈತ್ರಿ ಧರ್ಮ ಪಾಲಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.