ADVERTISEMENT

ಎಂಥಾ ಮಾತು

ಪಿಟಿಐ
Published 16 ಏಪ್ರಿಲ್ 2024, 20:15 IST
Last Updated 16 ಏಪ್ರಿಲ್ 2024, 20:15 IST
ಪ್ರಿಯಾಂಕಾ
ಪ್ರಿಯಾಂಕಾ   

ಅಸ್ಸಾಂನ ಚಹಾ ತೋಟಗಳಲ್ಲಿ ದಿನಗೂಲಿಗೆ ಕೆಲಸ ಮಾಡುವ ನೌಕರರು ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವನ್ನು ಬೆಂಬಲಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಚಹಾ ತೋಟಗಳ ನೌಕರರ ವೇತನವನ್ನು ಏರಿಕೆ ಮಾಡಲಾಗುವುದು ಎಂದು ಮೂರು ವರ್ಷಗಳ ಹಿಂದೆ ನಾನು ಆಸ್ಸಾಂಗೆ ಭೇಟಿ ನೀಡಿದ್ದಾಗ ಭರವಸೆ ನೀಡಿದ್ದೆ. ಆದರೆ ನೌಕರರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವರ ವೇತನ ₹250ಕ್ಕಿಂತ ಹೆಚ್ಚಳವಾಗಿಲ್ಲ. ಆಡಳಿತಾರೂಢ ಬಿಜೆಪಿಯು ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದರೆ ಅದು ಸಂವಿಧಾನವನ್ನು ಬದಲಿಸಲಿದೆ

ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ನಾಯಕಿ

‘ಏಕರೂಪ ನಾಗರಿಕ ಸಂಹಿತೆ’ಯನ್ನು (ಯುಸಿಸಿ) ಉತ್ತರಾಖಂಡದಲ್ಲಿ ಪರಿಚಯಿಸಿರುವಂತೆ ಇಡೀ ದೇಶದಲ್ಲೂ ಜಾರಿಗೆ ತರುವ ಗ್ಯಾರಂಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಇತರ ರಾಜ್ಯಗಳಲ್ಲಿ ಕಾಶ್ಮೀರದ ವಿಷಯದ ಪ್ರಸ್ತುತತೆ ಏನು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದಾರೆ. ಕಾಶ್ಮೀರವನ್ನು ಉಳಿಸಲು ಉತ್ತರಾಖಂಡದ ಗರ್ವಾಲ್‌ನ ಸೈನಿಕರು ರಕ್ತ ಸುರಿಸಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಯಾರಾದರೂ ಪಾಕಿಸ್ತಾನದಿಂದ ಬಂದು ಇಲ್ಲಿ ಬಾಂಬ್‌ ಸ್ಫೋಟ ನಡೆಸಿ ಮರಳುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಳನುಸುಳುವ ಉಗ್ರರನ್ನು ಸದೆಬಡಿದಿದೆ

ADVERTISEMENT

ಅಮಿತ್ ಶಾ, ಕೇಂದ್ರ ಗೃಹಸಚಿವ

ಅಮಿತ್‌ ಶಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.