ADVERTISEMENT

ಮೀಸಲಾತಿ ಆರ್‌ಎಸ್‌ಎಸ್ ಬೆಂಬಲಿಸಲಿದೆ: ಭಾಗವತ್‌

ಪಿಟಿಐ
Published 28 ಏಪ್ರಿಲ್ 2024, 13:03 IST
Last Updated 28 ಏಪ್ರಿಲ್ 2024, 13:03 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಹೈದರಾಬಾದ್‌:  ಸಂವಿಧಾನಬದ್ಧವಾದ ಮೀಸಲಾತಿಯನ್ನು ಸಂಘವು ಯಾವಾಗಲೂ ಬೆಂಬಲಿಸುತ್ತದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಂದು ಭಾನುವಾರ ಹೇಳಿದ್ದಾರೆ. 

ಬಿಜೆಪಿ ಮತ್ತು ಆರೆಸ್ಸೆಸ್ ಮೀಸಲಾತಿ ವಿರೋಧಿಯಾಗಿವೆ ಎಂದು ಪ್ರತಿಪಕ್ಷಗಳ ದಾಳಿಗೆ ಗುರಿಯಾಗುತ್ತಿರುವ ಮಧ್ಯೆ ಮೋಹನ್‌ ಭಾಗವತ್‌ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿನ ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ, ಮೀಸಲಾತಿ ವಿರುದ್ಧ ತಾವು ನೀಡಿರುವ ಹೇಳಿಕೆಯೊಂದರ ವಿಡಿಯೊ ಹರಿದಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ’ಆರ್‌ಎಸ್‌ಎಸ್ ಮೀಸಲಾತಿಯನ್ನು ವಿರೋಧಿಸುತ್ತದೆ ಎಂಬುದು ಸುಳ್ಳು. ಮೀಸಲಾತಿ ಜಾರಿಯಾದ ದಿನದಿಂದಲೂ ಸಂಘವು ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಸಂಪೂರ್ಣವಾಗಿಯೇ ಬೆಂಬಲಿಸಿಕೊಂಡು ಬಂದಿದೆ‘ ಎಂದು ತಿಳಿಸಿದ್ದಾರೆ.

ADVERTISEMENT

ಆರ್‌ಎಸ್‌ಎಸ್-ಬಿಜೆಪಿ ಮೀಸಲಾತಿಯನ್ನು ವಿರೋಧಿಸುತ್ತಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಶನಿವಾರ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.