ADVERTISEMENT

ಆಂಧ್ರ: ಟಿಡಿಪಿ ಅಭ್ಯರ್ಥಿ ಚಂದ್ರಶೇಖರ್ ₹ 5,785 ಕೋಟಿ ಆಸ್ತಿ ಘೋಷಣೆ

ಪಿಟಿಐ
Published 23 ಏಪ್ರಿಲ್ 2024, 9:54 IST
Last Updated 23 ಏಪ್ರಿಲ್ 2024, 9:54 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಪಿ. ಚಂದ್ರಶೇಖರ್ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಸ್ಥಿರ ಮತ್ತು ಚರ ಆಸ್ತಿ ಸೇರಿ ಒಟ್ಟು ₹ 5,785 ಕೋಟಿಯನ್ನು ಘೋಷಣೆ ಮಾಡಿದ್ದಾರೆ.

ಪಿ. ಚಂದ್ರಶೇಖರ್ ಅವರು ಆಂಧ್ರದಲ್ಲಿ ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ಚಂದ್ರಶೇಖರ್ ಹೆಸರಲ್ಲಿ ₹ 2,448 ಕೋಟಿ, ಪತ್ನಿ ಶ್ರೀರತ್ನ ಹೆಸರಲ್ಲಿ ₹ 2,343 ಹಾಗೂ ಮಕ್ಕಳ ಹೆಸರಲ್ಲಿ ₹ 1000 ಕೋಟಿ ಸ್ಥಿರ ಮತ್ತು ಚರ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಪುತ್ರ ನಕುಲ್‌ ನಾಥ್‌ ಅವರು ₹ 717 ಕೋಟಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳ ಪೈಕಿ ಇವರು ಶ್ರೀಮಂತ ಅಭ್ಯರ್ಥಿಯಾಗಿದ್ದರು.

ADVERTISEMENT

ಚಂದ್ರಶೇಖರ್‌ ಅವರು ಅಮೆರಿಕದ ಬ್ಯಾಂಕ್‌ಗಳು, ಸಂಸ್ಥೆಗಳು ಹಾಗೂ ಅಲ್ಲಿನ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಚಂದ್ರಶೇಖರ್‌ ವೈದ್ಯರಾಗಿದ್ದು ಅಮೆರಿಕದ ಹಲವು ಪ್ರಸಿದ್ಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಟಿಡಿಪಿಯ ಎನ್‌ಆರ್‌ಐ ಘಟಕದ ಮುಖ್ಯಸ್ಥರಾಗಿ ಪಕ್ಷಕ್ಕೆ ಕೆಲಸ ಮಾಡಿದ್ದಾರೆ.

ಪ್ರಸ್ತುತ ಅವರು ವೈ.ಎಸ್.ಆರ್.ಕಾಂಗ್ರೆಸ್ ಪಕ್ಷದ ಕೆ.ವೆಂಕಟ್‌ ವಿರುದ್ಧ ಚಂದ್ರಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ. ‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.