ADVERTISEMENT

ಲೋಕಸಭಾ ಚುನಾವಣೆ: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಎಸ್‌ಪಿ

ಪಿಟಿಐ
Published 24 ಮಾರ್ಚ್ 2024, 9:18 IST
Last Updated 24 ಮಾರ್ಚ್ 2024, 9:18 IST
<div class="paragraphs"><p>ಬಿಎಸ್‌ಪಿ ಚಿಹ್ನೆ</p></div>

ಬಿಎಸ್‌ಪಿ ಚಿಹ್ನೆ

   

ಲಖನೌ: ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 16 ಸ್ಥಾನಗಳಿಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಭಾನುವಾರ) ಅಧಿಕೃತವಾಗಿ ಪ್ರಕಟಿಸಿದೆ.

ಕೆಲವು ಜಿಲ್ಲೆಗಳಲ್ಲಿ ಪಕ್ಷದ ಉಸ್ತುವಾರಿಗಳು ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದಲ್ಲಿ ಮೊದಲೇ ಘೋಷಿಸಿದ್ದರು.

ADVERTISEMENT

ಮಾಯಾವತಿ ನೇತೃತ್ವದ ಪಕ್ಷವು ಶಹರಾನ್‌ಪುರದಿಂದ ಮಜಿದ್‌ ಅಲಿ, ಕೈರಾನಾದಿಂದ ಶ್ರೀಪಾಲ್‌ ಸಿಂಗ್‌, ಮುಜಾಫರ್‌ ನಗರದಿಂದ ದಾರಾ ಸಿಂಗ್‌ ಪ್ರಜಾಪತಿ, ಬಿಜ್ನೋರ್‌ನಿಂದ ವಿಜಯೇಂದ್ರ ಸಿಂಗ್‌, ನಗೀನಾದಿಂದ ಸುರೇಂದ್ರ ಪಾಲ್‌ ಸಿಂಗ್‌ ಮತ್ತು ಮೊರಾದಾಬಾದ್‌ನಿಂದ ಮೊಹಮ್ಮದ್‌ ಇರ್ಫಾನ್‌ ಸೈಫಿ ಅವರನ್ನು ಕಣಕ್ಕಿಳಿಸಿದೆ.

ರಾಂಪುರದಿಂದ ಜಿಶಾನ್‌ ಖಾನ್‌, ಸಂಭಾಲ್‌ನಿಂದ ಶೌಲತ್‌ ಅಲಿ, ಅಮ್ರೋಹಾದಿಂದ ಮೊಜಾಹಿದ್‌ ಹುಸೇನ್‌, ಮೀರತ್‌ನಿಂದ ದೇವವ್ರತ್‌ ತ್ಯಾಗಿ ಮತ್ತು ಬಾಗ್‌ಪತ್‌ನಿಂದ ಪ್ರವೀಣ್‌ ಬನ್ಸಾಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಪಕ್ಷವು ತಿಳಿಸಿದೆ.

ಇದರೊಂದಿಗೆ, ಗೌತಮ್ ನಗರದಿಂದ ರಾಜೇಂದ್ರ ಸಿಂಗ್ ಸೋಲಂಕಿ ಅವರು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಬುಲಂದ್‌ಶಹರ್‌ನಿಂದ ಗಿರೀಶ್‌ ಚಂದ್ರ ಜಾತವ್‌, ಅಯೋನ್ಲಾದಿಂದ ಅಬಿದ್‌ ಅಲಿ, ಪಿಲಿಭಿತ್‌ನಿಂದ ಅನೀಸ್‌ ಅಹ್ಮದ್‌ ಖಾನ್‌ ಮತ್ತು ಶಹಜಹಾನ್‌ಪುರನಿಂದ ದೊಡರಾಮ್‌ ವರ್ಮಾ ಸ್ಪರ್ಧಿಸಲಿದ್ದಾರೆ.

ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.