ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್
ಚಿತ್ರ: ಎಕ್ಸ್ / @PSTamangGolay
ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷವು ಸತತ ಎರಡನೇ ಬಾರಿಗೆ ಸಿಕ್ಕಿಂನಲ್ಲಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತೊಮ್ಮೆ ಸರ್ಕಾರ ರಚಿಸುವುದು ಖಾತ್ರಿಯಾಗಿದೆ.
ಸದ್ಯ 27 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಸೇರಿದಂತೆ ಎಸ್‌ಕೆಎಂ ಪಕ್ಷದ 26 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್), ಕೇವಲ 1 ಸ್ಥಾನದಲ್ಲಷ್ಟೇ ಜಯದ ನಗು ಬೀರಿದೆ.
ಬಾಕಿ ಇರುವ 5 ಕ್ಷೇತ್ರಗಳಲ್ಲಿಯೂ ಎಸ್‌ಕೆಎಂ ಮುನ್ನಡೆ ಕಾಯ್ದುಕೊಂಡಿದೆ.
2019ರಲ್ಲಿ 17 ಸ್ಥಾನಗಳನ್ನು ಗೆದ್ದಿದ್ದ ಎಸ್‌ಕೆಎಂ, ಭಾರಿ ಬಹುಮತದತ್ತ ಮುನ್ನುಗ್ಗುತ್ತಿದೆ. ಎಸ್‌ಡಿಎಫ್ ಪಕ್ಷ ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯಲ್ಲಿ, ಯಾವುದೇ ಪಕ್ಷ ಬಹುಮತ ಸಾಧಿಸಲು 17 ಸ್ಥಾನಗಳಲ್ಲಿ ಗೆಲ್ಲಬೇಕಿದೆ.
ಎರಡೂ ಕಡೆ ಸೋತ ಮಾಜಿ ಸಿಎಂ
ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಪವನ್ ಕುಮಾರ್ ಚಾಮ್ಲಿಂಗ್ ಅವರು, ಈ ಬಾರಿ ಕಣಕ್ಕಿಳಿದಿದ್ದ ಎರಡೂ ಕ್ಷೇತ್ರಗಳಲ್ಲಿ ಮುಗ್ಗರಿಸಿದ್ದಾರೆ.
ಅವರು ಪೊಕ್ಲಾಕ್–ಕಮ್ರಾಂಗ್ ಮತ್ತು ನಮ್ಚಯ್ಬಾಂಗ್ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.