ADVERTISEMENT

ದೆಹಲಿಗೆ ಸಿದ್ದರಾಮಯ್ಯ: ಹಾಸನ ಕಾಂಗ್ರೆಸ್ - ಜೆಡಿಎಸ್‌ ಮುಖಂಡರ ‌ಸಭೆ‌ ಮುಂದೂಡಿಕೆ 

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 10:14 IST
Last Updated 21 ಮಾರ್ಚ್ 2019, 10:14 IST
   

ಬೆಂಗಳೂರು: ಸಿದ್ದರಾಮಯ್ಯ ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್- ಜೆಡಿಎಸ್‌ ಮುಖಂಡರ ‌ಸಭೆ‌ ಶನಿವಾರಕ್ಕೆ ಮುಂದೂಡಿಕೆಯಾಗಿದೆ.

ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಸ್ಥಳೀಯ ಮುಖಂಡರು ಹಾಜರಿರುವಂತೆ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ.

ಸಭೆಗಾಗಿ ಬಂದಿದ್ದ ಮಾಜಿ ಸಚಿವ ಗಂಡಸಿ ಶಿವರಾಂ, ಕೆಪಿಸಿಸಿ ಸದಸ್ಯ ಹೆಚ್.ಕೆ ಮಹೇಶ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಸೇರಿದಂತೆ ಹಲವರು ವಾಪಸು ಹೋದರು.

ADVERTISEMENT

ಗಂಡಸಿ ಶಿವರಾಂ ಮಾತನಾಡಿ, ‘ಶುಕ್ರವಾರ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮನ್ನು ಕರೆದರೆ ಹೋಗುತ್ತೇವೆ ಅಷ್ಟೇ. ಇಲ್ಲದೇ ಇದ್ದಲ್ಲಿ ಮುಂದೆ ಏನು ಮಾಡಬೇಕು ಎಂದು ಯೋಚಿಸುತ್ತೇವೆ’ ಎಂದರು.

‘ಎ.ಮಂಜು ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರ ವಿರುದ್ಧ ನಮ್ಮ ಶಕ್ತಿ ಏನು ಅನ್ನೋದನ್ನ ತೋರಿಸುತ್ತೇವೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ’ ಎಂದರು.

ಹಾಸನ ಕಾಂಗ್ರೆಸ್ ಮುಖಂಡ ಹೆಚ್. ಕೆ ಮಹೇಶ್ ಮಾತನಾಡಿ, ‘ಎ.ಮಂಜು ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಪುತ್ರ ಕಾಂಗ್ರೆಸ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಂಜು ಪುತ್ರ ಮಂಥರಗೌಡ ಹಾಜರಿರಲಿದ್ದಾರೆ. ಒಂದು ವೇಳೆ ಬರದೇ ಇದ್ದಲ್ಲಿ ಅವರು ಕಾಂಗ್ರೆಸ್‌ನಲ್ಲಿ ಇಲ್ಲ ಎಂದುಕೊಳ್ಳಬಹುದು’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.