ADVERTISEMENT

ಮಾವಳ್ಳಿಯಲ್ಲಿ ಪ್ರಚಾರ, ಕಾರ್ಮಿಕರ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 22:30 IST
Last Updated 24 ಏಪ್ರಿಲ್ 2024, 22:30 IST
ಸೌಮ್ಯಾ ರೆಡ್ಡಿ ಅವರು ಮಾವಳ್ಳಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು
ಸೌಮ್ಯಾ ರೆಡ್ಡಿ ಅವರು ಮಾವಳ್ಳಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಮಾವಳ್ಳಿಯಲ್ಲಿ ಬುಧವಾರ ಪ್ರಚಾರ ನಡೆಸಿ, ಸಾರಿಗೆ ನೌಕರರು, ಆಟೊ ರಿಕ್ಷಾ ಚಾಲಕರು, ಕಾರ್ಮಿಕರು, ಗಿಗ್‌ ನೌಕರರು ಹಾಗೂ ಸ್ಥಳೀಯರನ್ನು ಭೇಟಿಯಾಗಿ ಮತಯಾಚಿಸಿದರು.

ಪ್ರಚಾರಕ್ಕೆ ಸಾರಿಗೆ ಸಚಿವರಾಗಿರುವ ತಂದೆ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು. 

‘ಶ್ರಮಿಕ ವರ್ಗದ ಪ್ರಗತಿ ನಮ್ಮ ಆದ್ಯತೆಯಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಶ್ರಮಿಕ ನ್ಯಾಯ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಆರೋಗ್ಯ ಭದ್ರತೆ, ಸಾಮಾಜಿಕ ಭದ್ರತೆ, ಜೀವ ವಿಮೆ ಮತ್ತು ಅಪಘಾತ ವಿಮೆಗಳನ್ನು ನೀಡಲಾಗುತ್ತದೆ’ ಎಂದು ಸೌಮ್ಯಾ ಭರವಸೆ ನೀಡಿದರು.  

ADVERTISEMENT

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಜತೆಗೆ ಸೌಮ್ಯಾ ರೆಡ್ಡಿ ಅವರು ಗುರು ರಾಘವೇಂದ್ರ ಬ್ಯಾಂಕಿನ ಸಂತ್ರಸ್ತ ಠೇವಣಿದಾರರ ಸಮಸ್ಯೆಗಳನ್ನು ಆಲಿಸಿದರು. 

ದ್ರೌಪದಿದೇವಿ ಕರಗ ಶಕ್ತ್ಯೋತ್ಸವದಲ್ಲಿ (ಬೆಂಗಳೂರು ಕರಗ) ಮಂಗಳವಾರ ರಾತ್ರಿ ಭಾಗವಹಿಸಿದ್ದರು. ಉತ್ಸವಕ್ಕೆ ಆಗಮಿಸಿದ್ದ ಭಕ್ತರ ಜತೆಗೆ ಕೆಲಹೊತ್ತು ಸಮಯ ಕಳೆದ ಅವರು, ದೇವಸ್ಥಾನದ ಸಮಿತಿ ಸದಸ್ಯರ ಜತೆಗೆ ಸಮಾಲೋಚನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಪಿ.ಆರ್. ರಮೇಶ್, ಆರ್.ವಿ. ಯುವರಾಜ್ ಸಾಥ್ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.