ADVERTISEMENT

ವಿಧಾನಸಭಾ ಚುನಾವಣೆ | ಮತದಾನಕ್ಕಾಗಿ ಮತಗಟ್ಟೆಯಿಂದ ಮತಗಟ್ಟೆಗೆ ಅಲೆದಾಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 10 ಮೇ 2023, 10:14 IST
Last Updated 10 ಮೇ 2023, 10:14 IST
   

ಬೆಂಗಳೂರು: ದಾಸರಹಳ್ಳಿ ಕ್ಷೇತ್ರದಲ್ಲಿ ಮತದಾನಕ್ಕಾಗಿ ಮಹಿಳೆಯೊಬ್ಬರು ಮತಗಟ್ಟೆಯಿಂದ ಮತಗಟ್ಟೆಗೆ ಬೆಳಿಗ್ಗೆಯಿಂದಲೂ ಅಲೆದಾಡುತ್ತಿದ್ದಾರೆ.

ಲಕ್ಷ್ಮಮ್ಮ ಎಂಬುವರು ರಾಜಾಜಿನಗರ ಕ್ಷೇತ್ರದ ಬಸವೇಶ್ವರನಗರದ ಮತದಾರರ ಗುರುತಿನ ಚೀಟಿಯನ್ನು ಕೈಯಲ್ಲಿ ಹಿಡಿದು ದಾಸರಹಳ್ಳಿ ಕ್ಷೇತ್ರದಲ್ಲಿ ಅಲೆದಾಡಿದರು.

ಬಸವೇಶ್ವರನಗರದಲ್ಲಿ ವಾಸವಿದ್ದ ಇವರು, ಈಗ ದಾಸರಹಳ್ಳಿಯಲ್ಲಿ ನೆಲೆಸಿದ್ದಾರೆ. ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಪ್ರಯತ್ನಿಸಿ ಸ್ವೀಕೃತಿ ಪಡೆದಿದ್ದಾರೆ. ಚಿಕ್ಕಬಾಣಾವರ, ಬಾಗಲಗುಂಟೆ ಮತಗಟ್ಟೆಗಳಲ್ಲಿ ಸುತ್ತಾಡಿ, ದಾಸರಹಳ್ಳಿ ಮತಗಟ್ಟೆಗೆ ಬಂದರು.

ADVERTISEMENT

ಮತಗಟ್ಟೆ ಬಳಿ ಚೀಟಿ ಬರೆದುಕೊಡುವ ರಾಜಕೀಯ ಪಕ್ಷಗಳ ಕೌಂಟರ್‌ನಲ್ಲಿ ಪಟ್ಟಿ ಪರಿಶೀಲಿಸಿದರು.

ಮಹೇಶ್ವರಮ್ಮ ದೇವಸ್ಥಾನ ರಸ್ತೆಯಲ್ಲಿನ ಮತಗಟ್ಟೆಗೆ ಹೋಗಲು ಸ್ಥಳೀಯರು ಸೂಚಿಸಿದರು.

ಬೆಳಿಗ್ಗೆಯಿಂದ ಇದು ಮೂರನೇ ಮತಗಟ್ಟೆ, ಮತದಾನ ಮಾಡಲೇಬೇಕೆಂದು ಸುತ್ತಾಡುತ್ತಿದ್ದೇನೆ ಎಂದು ಲಕ್ಷ್ಮಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.