ADVERTISEMENT

ದಾವಣಗೆರೆ: ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕೆ ಬೇಸರ ಇಲ್ಲ– ತೇಜಸ್ವಿ ಪಟೇಲ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:38 IST
Last Updated 30 ಏಪ್ರಿಲ್ 2019, 15:38 IST
ತೇಜಸ್ವಿ ಪಟೇಲ್
ತೇಜಸ್ವಿ ಪಟೇಲ್   

ದಾವಣಗೆರೆ: ‘ಸ್ಥಳೀಯ ಮುಖಂಡರ ಸಹಮತ ಇಲ್ಲದಿರುವುದರಿಂದ ನನಗೆ ಟಿಕೆಟ್ ತಪ್ಪಿರಬಹುದು. ನಾನು ಟಿಕೆಟ್‌ ಆಕಾಂಕ್ಷಿಯಾಗಿರಲಿಲ್ಲ. ನನಗೆ ಬೇಸರವೂ ಇಲ್ಲ. ಆದರೆ, ಕಾಂಗ್ರೆಸ್‌ ರೈತಪರ ಹೋರಾಟಗಾರರನ್ನು ಗುರುತಿಸುವ ಕೆಲಸವನ್ನು ಮುಂದುವರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಪಕ್ಷೇತರ ಅಭ್ಯರ್ಥಿ ತೇಜಸ್ವಿ ಪಟೇಲ್ ಹೇಳಿದರು.

ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಕರೆಯ ಮೇರೆಗೆ ಭೇಟಿ ಮಾಡಿದ್ದೆ. ಸ್ಪರ್ಧೆ ಬಗ್ಗೆ ಒಪ್ಪಿಗೆ ಸೂಚಿಸಿದ್ದೆ. ಮುಂದೆ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಟಿಕೆಟ್‌ ಘೋಷಣೆಯನ್ನು ಇಷ್ಟು ದಿನ ವಿಳಂಬ ಮಾಡಿದ್ದು ಸರಿ ಅಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

‘ಪಕ್ಷದ ಟಿಕೆಟ್ ಪಡೆದ ಎಚ್‌.ಬಿ. ಮಂಜಪ್ಪ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆ ಪಕ್ಷದ ಮುಖಂಡರ ಪ್ರಚಾರ ಶೈಲಿ ಗಮನಿಸಿ ಬೆಂಬಲಿಸುವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.