ADVERTISEMENT

ಬಸವಣ್ಣನವರ‌ ವಚನಗಳನ್ನು ಓದಿ: ಪ್ರಧಾನಿ ಮೋದಿಗೆ‌ ರಾಹುಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 7:41 IST
Last Updated 27 ಏಪ್ರಿಲ್ 2018, 7:41 IST
ಬಸವಣ್ಣನವರ‌ ವಚನಗಳನ್ನು ಓದಿ: ಪ್ರಧಾನಿ ಮೋದಿಗೆ‌ ರಾಹುಲ್ ಸಲಹೆ
ಬಸವಣ್ಣನವರ‌ ವಚನಗಳನ್ನು ಓದಿ: ಪ್ರಧಾನಿ ಮೋದಿಗೆ‌ ರಾಹುಲ್ ಸಲಹೆ   

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಬಸವಣ್ಣನವರ‌ ವಚನಗಳನ್ನು ಓದಿಕೊಳ್ಳಲಿ. ನುಡಿದಂತೆ ನಡೆಯುವುದನ್ನು ಕಲಿತುಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ‌ ರಾಹುಲ್ ಗಾಂಧಿ ಹೇಳಿದರು.

ಬಂಟ್ವಾಳದಲ್ಲಿ‌ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮೊದಲು ನೀಡಿದ್ದ ಭರವಸೆಗಳನ್ನು ಪ್ರಧಾನಿ ಮರೆತಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ತಿಳಿಸಿದರು.

ನಮ್ಮದು ಜನರ‌ ಆಶೋತ್ತರಗಳನ್ನು ಈಡೇರಿಸುವ ಸರ್ಕಾರ. ಬಿಜೆಪಿಯದ್ದು ಲೂಟಿಕೋರರ ಹಿತಾಸಕ್ತಿ ಕಾಪಾಡುವ ಸರ್ಕಾರ. ಗಣಿ ಲೂಟಿ ಮಾಡಿ ಜೈಲು ಸೇರಿದವರೆಲ್ಲ ಈಗ ಮತ್ತೆ ಒಂದಾಗಿದ್ದಾರೆ. ಇದನ್ನು ಜನರು ಗಮನಿಸುತ್ತಿದ್ದಾರೆ ಎಂದರು.

ADVERTISEMENT

ಬಿಜೆಪಿಗೆ ಯಾವುದೇ ಮಾನ ಮರ್ಯಾದೆ ಇಲ್ಲ: ಸಿಎಂ
ಐದು ವರ್ಷದಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಲೂಟಿ ಮಾಡಿದ್ದ ಜನಾರ್ದನ ರೆಡ್ಡಿ, ಶ್ರೀರಾಮುಲು, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಎಲ್ಲರೂ ಈಗ ಒಂದಾಗಿದ್ದಾರೆ. ಬಿಜೆಪಿಯವರಿಗೆ ಯಾವುದೇ ಮಾನ, ಮರ್ಯಾದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.