ADVERTISEMENT

ರಾಹುಲ್‌ ಗಾಂಧಿ ನಾಮಪತ್ರ ಕ್ರಮಬದ್ಧ

ಪಿಟಿಐ
Published 22 ಏಪ್ರಿಲ್ 2019, 20:16 IST
Last Updated 22 ಏಪ್ರಿಲ್ 2019, 20:16 IST
 ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಅಮೇಠಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಅಲ್ಲಿನ ಚುನಾವಣಾಧಿಕಾರಿ ರಾಮ್‌ಮನೋಹರ್ ಮಿಶ್ರಾ ಹೇಳಿದ್ದಾರೆ.

ಪೌರತ್ವ ಮತ್ತು ಇತರ ವಿಚಾರಗಳಲ್ಲಿ ರಾಹುಲ್‌ ಅವರು ಸಲ್ಲಿಸಿರುವ ನಾಮಪತ್ರದ ವಿವರಗಳು ತಾಳೆಯಾಗುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಧ್ರುವಲಾಲ್‌ ಎತ್ತಿರುವ ಆಕ್ಷೇಪಗಳನ್ನು ಚುನಾವಣಾಧಿಕಾರಿ ತಳ್ಳಿ ಹಾಕಿದ್ದಾರೆ.

ರಾಹುಲ್‌ ಅವರು ಹೂಡಿಕೆ ಮಾಡಿರುವ ಬ್ರಿಟನ್‌ ಕಂಪನಿಯಲ್ಲಿ ಅವರು ಬ್ರಿಟನ್‌ ಪ್ರಜೆ ಎಂದು ಉಲ್ಲೇಖಿಸಲಾಗಿದೆ ಎಂದು ಧ್ರುವಲಾಲ್‌ ಮತ್ತು ಇತರ ಮೂವರು ದೂರು ಸಲ್ಲಿಸಿದ್ದರು. ಅವರ ವಿದ್ಯಾರ್ಹತೆ ಬಗೆಗಿನ ಮಾಹಿತಿಯೂ ಸರಿಯಾಗಿಲ್ಲ ಎಂದು ದೂರಿನಲ್ಲಿ ಹೇಳಲಾಗಿತ್ತು. ಈ ಬಗ್ಗೆ ವಿವರಣೆ ನೀಡುವಂತೆ ರಾಹುಲ್‌ ಅವರಿಗೆ ಸೂಚಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.