ADVERTISEMENT

ಮೈಸೂರಿನಲ್ಲೇ ಕಾಲ ಕಳೆದ ಸುಮಲತಾ

ಮೈಸೂರಿನ ವಿವಿಧ ದೇವಸ್ಥಾನಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:05 IST
Last Updated 23 ಮೇ 2019, 13:05 IST
ಅಂಬರೀಷ್‌ ಅವರ ತಾತ ಪಿಟೀಲು ಚೌಡಯ್ಯ ಅವರ ನಿವಾಸದಲ್ಲಿ ಕೆಲಹೊತ್ತು ಕಾಲ ಕಳೆದ ಸುಮಲತಾ
ಅಂಬರೀಷ್‌ ಅವರ ತಾತ ಪಿಟೀಲು ಚೌಡಯ್ಯ ಅವರ ನಿವಾಸದಲ್ಲಿ ಕೆಲಹೊತ್ತು ಕಾಲ ಕಳೆದ ಸುಮಲತಾ   

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಎಣಿಕೆಯ ದಿನ ಸಂಪೂರ್ಣವಾಗಿ ಮೈಸೂರಿನಲ್ಲೇ ಕಾಲ ಕಳೆದರು.

ಬೆಳಿಗ್ಗೆ 10.30ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿಗೆ ಪ್ರಾರ್ಥಿಸಿದ ಅವರು, ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಅಲ್ಲಿಂದ ನೇರವಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಮೈಸೂರಿನ ಚಾಮರಾಜಪುರಂನ ಪಿಟೀಲು ಚೌಡಯ್ಯ ಅವರ‌ ನಿವಾಸಕ್ಕೆ ಭೇಟಿ ನೀಡಿ, ಅಂಬರೀಷ್ ಸಹೋದರ ಎಂ.ಎಚ್.ಆನಂದ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.

ADVERTISEMENT

ಚುನಾವಣೆ ಮತ ಎಣಿಕೆ‌ ಪ್ರಕ್ರಿಯೆಯನ್ನು ಟಿ.ವಿ.ಯಲ್ಲಿ ವೀಕ್ಷಿಸಿದರು. ಗೆಲುವು ಪ್ರಕಟವಾದ ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು. ಸುಮಲತಾ ಅವರೊಂದಿಗೆ ನಟ ದೊಡ್ಡಣ್ಣ ದಿನಪೂರ್ತಿ ಸಾಥ್‌ ನೀಡಿದರು. ಮತಎಣಿಕೆ ಕಾರ್ಯ ಸಂಪೂರ್ಣವಾಗಿ ಮುಗಿದ ಬಳಿಕವೇ ಅವರು ಮಂಡ್ಯಕ್ಕೆ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.