ADVERTISEMENT

Karnataka Election 2023 | ಇವಿಎಂ, ವಿವಿಪ್ಯಾಟ್‌ ತಾಳೆಯಾಗದಿದ್ದರೆ ಏನಾಗಲಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2023, 9:17 IST
Last Updated 18 ಏಪ್ರಿಲ್ 2023, 9:17 IST
   

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಮತದಾನ ನಡೆದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾನಕ್ಕೆ ಎಲೆಕ್ಟ್ರಾನಿಕ್‌ ವೋಟಿಂಗ್ ಮಷಿನ್‌ (ಇವಿಎಂ) ಹಾಗೂ ವೋಟರ್‌ ವೆರಿಫೈಯೆಬಲ್‌ ಪೇಪರ್‌ ಆಡಿಟ್‌ ಟ್ರಯಲ್ಸ್‌ (ವಿವಿಪ್ಯಾಟ್‌) ಅನ್ನು ಬಳಸಲಾಗುತ್ತದೆ.

ಹಾಗಿದ್ದರೆ ಈ ಯಂತ್ರಗಳ ಕೆಲಸ ಏನು? ಒಂದು ವೇಳೆ ಇವಿಎಂ ಹಾಗೂ ವಿವಿಪ್ಯಾಟ್ ತಾಳೆಯಾಗದಿದ್ದರೆ ಏನಾಗಲಿದೆ? ಇಲ್ಲಿದೆ ಮಾಹಿತಿ.

ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಮತದಾನ ಮಾಡಲು ಕಲ್ಪಿಸುವ ಸಾಧನವೇ ಇವಿಎಂ. ಮತದಾನ ಮಾಡುವ ಹಾಗೂ ಮತ ಎಣಿಕೆ ಮಾಡುವ ಸಾಧನ. ಇವಿಎಂನಲ್ಲಿ ಕಂಟ್ರೋಲ್‌ ಯೂನಿಟ್‌ ಹಾಗೂ ಬಾಲೆಟಿಂಗ್‌ ಯುನಿಟ್‌ ಎನ್ನುವ ಎರಡು ಸಾಧನಗಳ ಮೂಲಕ ಇವಿಎಂ ಮಷಿನ್‌ ಅನ್ನು ವಿನ್ಯಾಸ ಮಾಡಲಾಗಿದೆ.

ADVERTISEMENT

ತಾನು ಉದ್ದೇಶಿಸಿದ ಅಭ್ಯರ್ಥಿಗೆ ಮತ ಬಿದ್ದಿದ್ದೆಯೇ ಇಲ್ಲವೇ ಎಂದು ಮತದಾರ ಖಾತರಿ ಪಡಿಸಿಕೊಳ್ಳಲು ಇರುವ ಯಂತ್ರವೇ ವಿವಿಪ್ಯಾಟ್ ಮಷಿನ್‌. ಇವಿಎಂನಲ್ಲಿ ಮತದಾನ ಮಾಡಿದ ಕೂಡಲೇ, ವಿವಿಪ್ಯಾಟ್‌ನಲ್ಲಿ ಮತದಾರ ಗುಂಡಿ ಒತ್ತಿದ ಕೂಡಲೇ, ಮತ ಚಲಾಯಿಸಿದ ಅಭ್ಯರ್ಥಿಯ ಹೆಸರು, ಚಿಹ್ನೆ, ಕ್ರಮ ಸಂಖ್ಯೆ ಮುಂತಾದ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ. ಅದು ಮುದ್ರಣ ಕೂಡ ಆಗುತ್ತದೆ. ಚುನಾವಣೆ ಮೋಸ ತಡೆಯಲು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಇವಿಎಂ ಹಾಗೂ ವಿವಿ‍ಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಕೂಡ ತಾಳೆ ಹಾಕಲಾಗುತ್ತದೆ. ಒಂದು ವೇಳೆ ತಾಳೆಯಾಗದಿದ್ದರೆ ಏನಾಗಲಿದೆ?

ಇವಿಎಂ ಹಾಗೂ ವಿವಿಪ್ಯಾಟ್‌ ತಾಳೆಯಾಗದಿದ್ದರೆ, ವಿವಿಪ್ಯಾಟ್‌ನಲ್ಲಿ ಮುದ್ರಣವಾಗಿರುವ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.