ADVERTISEMENT

ಕನ್ನಡವೇ ಸತ್ಯ ಕನ್ನಡವೇ ನಿತ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಉತ್ತಮ ವಾಕ್ಚಾತುರ್ಯವುಳ್ಳ ಮಾತುಗಾರರನ್ನು ಗುರುತಿಸಿ ಕನ್ನಡ ಭಾಷೆಯ ಬಳಕೆಯ ಪ್ರಾಮುಖ್ಯ ಉತ್ತೇಜಿಸಲು ಉದಯ ವಾಹಿನಿ `ಕನ್ನಡವೇ ಸತ್ಯ ಕನ್ನಡವೇ ನಿತ್ಯ~ ರಿಯಾಲಿಟಿ ಶೋ ಆರಂಭಿಸುತ್ತಿದೆ.
 
ಸೆ.25ರಿಂದ ಬೆಳಿಗ್ಗೆ 11ರಿಂದ 12ಗಂಟೆವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಮೊದಲಿಗೆ 20 ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿದ್ದು 26 ವಾರ ಅವರ ನಡುವೆ ಸ್ಪರ್ಧೆ ನಡೆಯಲಿದೆ.
 
ಅವರಿಗೆ ಚರ್ಚಾ ಸ್ಪರ್ಧೆ, ಕಾವ್ಯ ಜ್ಞಾನ, ಆಂಗ್ಲ ಪದಗಳ ಸಮಾನಾರ್ಥಕ ಕನ್ನಡ ಪದ, ಆಂಗ್ಲ ಟಿಪ್ಪಣಿಯ ಅಚ್ಚಕನ್ನಡ ಅನುವಾದ ಮುಂತಾದ ಪರೀಕ್ಷೆಗಳಿರುತ್ತವೆ. ವಿಜೇತ ಸ್ಫರ್ಧಿಗೆ `ಕನ್ನಡದ ಮಾತಿನ ಮಲ್ಲ~ ಎಂಬ ಬಿರುದು ಮತ್ತು ಬಹುಮಾನಗಳನ್ನು ನೀಡಲಾಗುತ್ತದೆ.
 
ಡಾ.ದೊಡ್ಡರಂಗೇಗೌಡ ಮತ್ತು ಸುಧಾ ಬರಗೂರು ಮುಖ್ಯ ತೀರ್ಪುಗಾರರು. ಅವರೊಂದಿಗೆ ವಾರಕ್ಕೊಬ್ಬ ಅತಿಥಿ ತೀರ್ಪುಗಾರರು ಇರುತ್ತಾರೆ. ಅಪರ್ಣ ನಿರೂಪಣೆಯ ಹೊಣೆ ಹೊತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.