ADVERTISEMENT

ಗುರುಕಥೆ!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST

ನಿರ್ದೇಶಕ ಗುರುಪ್ರಸಾದ್ ಸೃಜನಶೀಲತೆಗೆ ಹೆಸರಾದವರು. ಸಿನಿಮಾ ಮಾತ್ರವಲ್ಲದೆ, ಸಾಹಿತ್ಯದಲ್ಲೂ ಆಸಕ್ತಿಯಿರುವ ಗುರು ಈಗಾಗಲೇ ‘ಸಿನಿಮಾ ಮಾಡಲಾಗದ ಕಥೆಗಳು’ ಹೆಸರಿನ ಪುಸ್ತಕವೊಂದನ್ನು ಹೊರತಂದಿದ್ದಾರೆ. ಈಗ ತಮ್ಮ ನಿರ್ದೇಶನ ‘ಮಠ’ ಮತ್ತು ‘ಎದ್ದೇಳು ಮಂಜುನಾಥಾ’ ಚಿತ್ರಗಳ ಚಿತ್ರಕಥೆಯನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.

ಗುರು ಅವರ ಪುಸ್ತಕಯುಗಳ ಬಿಡುಗಡೆಗೊಂಡಿದ್ದು ‘ಡಬ್ಬಲ್ ಡೆಕ್ಕರ್’ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಂದರ್ಭದಲ್ಲಿ. ಪುಸ್ತಕ ಬಿಡುಗಡೆ ಮಾಡಿದ ಜಗ್ಗೇಶ್, ಗುರುಪ್ರಸಾದ್‌ರ ಪ್ರಯತ್ನಕ್ಕೆ ಶುಭಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.