ADVERTISEMENT

ನಗರದಲ್ಲಿ `ಕಾಮಿಕ್ ನೊ ಮ್ಯಾಡ್ಸ್ ತಂಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ತಾವು ನಟಿಸಿದ ಸಿನಿಮಾಗಳ ಪ್ರಚಾರಕ್ಕಾಗಿ ನಟರು, ನಿರ್ಮಾಪಕ, ನಿರ್ದೇಶಕರು ಪ್ರಮುಖ ನಗರಗಳಲ್ಲಿ ಪ್ರವಾಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇದೀಗ ಕಾರ್ಟೂನ್, ಕಾಮಿಕ್ ವಾಹಿನಿಗಳ, ಸರಣಿಗಳ ಪಾತ್ರಧಾರಿಗಳು, ಹಾಸ್ಯಕಲಾವಿದರು, ವೇಷಧಾರಿಗಳು ದೇಶದೆಲ್ಲೆಡೆ ಸುತ್ತಿ ಪ್ರಚಾರದ ತಂತ್ರವನ್ನು ಅನುಸರಿಸುತ್ತಿದ್ದಾರೆ.

ಆರೆಂಜ್ಯೂಸ್ ಎಂಟರ್‌ಟೇನ್‌ಮೆಂಟ್ ಮತ್ತು ಹಾರ್ಸ್‌ಶೂ ಹಾಸ್ಪಿಟಾಲಿಟಿ ಅಂಡ್ ಎಂಟರ್‌ಟೇನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇದೀಗ `ಕಾಮಿಕ್ ನೊ ಮ್ಯಾಡ್' ಎಂಬ ಕಾರ್ಯಕ್ರಮದೊಂದಿಗೆ ಜನರ ಬಳಿ ಬರುತ್ತಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಕಾಮಿಕ್ಸ್‌ಗೆ ಪ್ರಚಾರ ನೀಡುವ ಉದ್ದೇಶದಿಂದ ನಡೆಯುವ `ಕಾಮಿಕ್ ನೊ ಮ್ಯಾಡ್'ನಲ್ಲಿ ಹೆಸರಾಂತ ಹಾಸ್ಯಪಟುಗಳಾದ ಅಜೀಂ ಬನಾತ್‌ವಾಲಾ, ಅಭೀಶ್ ಮ್ಯಾಥ್ಯೂ ಮತ್ತು ನೀತಿ ಪಾಲ್ತಾ ಪಾಲ್ಗೊಂಡು ವೈವಿಧ್ಯಮಯ ಕಾರ್ಯಕ್ರಮಗಳಿಂದ ನಕ್ಕುನಗಿಸಲಿದ್ದಾರೆ.

ಜೂನ್ 7 ಮತ್ತು 8ರಂದು ನಗರದ ಅರಮನೆ ಅಡ್ಡರಸ್ತೆಯಲ್ಲಿರುವ `ಓಪಸ್ ರೆಸ್ಟೋರೆಂಟ್'ನಲ್ಲಿ, 9ರಂದು ಕೋರಮಂಗಲದ `ಬಾಲೀಸ್'ನಲ್ಲಿ ಕಾಮಿಕ್ ನೊ ಮ್ಯಾಡ್ಸ್ ಪ್ರದರ್ಶನ ನಡೆಯಲಿದೆ. ತಲಾ ಎರಡು ಗಂಟೆ ಕಾಲಾವಧಿಯ ಈ ಪ್ರದರ್ಶನಗಳು ಸರಿಯಾಗಿ 7ಕ್ಕೆ ಆರಂಭವಾಗಲಿದೆ. ಟಿಕೆಟ್‌ಗಾಗಿ ಸಂಪರ್ಕಿಸಬೇಕಾದ ವಿಳಾಸ: bookmyshow.com/ www.CanvasLaughFactory.com.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.