ADVERTISEMENT

ಮದ್ದೂರಿನಲ್ಲಿ ಸಿದ್ಲಿಂಗು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:30 IST
Last Updated 24 ಫೆಬ್ರುವರಿ 2011, 19:30 IST

ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ‘ಸಿದ್ಲಿಂಗು’ ಚಿತ್ರದ ಚಿತ್ರೀಕರಣ ಮದ್ದೂರಿನಲ್ಲಿ ಬಿರುಸಿನಿಂದ ಸಾಗಿದೆ. ನಾಯಕನ ಜನನ, ನಾಮಕರಣ ಶಾಸ್ತ್ರ ಹಾಗೂ ಬಾಲ್ಯದ ಸನ್ನಿವೇಶಗಳನ್ನು ಮದ್ದೂರಿನ ಬಳಿಯ ಬೆಸಗರಹಳ್ಳಿಯಲ್ಲಿ ನಿರ್ದೇಶಕ ವಿಜಯಪ್ರಸಾದ್ ಚಿತ್ರಿಸಿಕೊಂಡರು. ಫೆ. 25ರಿಂದ ಚಿತ್ರಕ್ಕೆ ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಶಿವನ ಸಮುದ್ರ ಮುಂತಾದ ಕಡೆ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಸುಮನ್ ರಂಗನಾಥ್ ಹಾಗೂ ಯೋಗೀಶ್ ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜ್ಞಾನಮೂರ್ತಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಉದಯ ಹೆಗಡೆ ಸಂಕಲನ ಇದೆ. ತಾರಾಬಳಗದಲ್ಲಿ ಯೋಗೀಶ್, ರಮ್ಯಾ, ಸುಮನ್ ರಂಗನಾಥ್, ರಂಗಾಯಣ ರಘು, ಶರಣ್, ಎಚ್.ಎಮ್.ಟಿ ವಿಜಯ್, ಕೆ.ಸಿ.ಶ್ರಿಧರ್, ವತ್ಸಲಾ ಮೋಹನ್ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.