ಜೈ ಜಗದೀಶ್ ಹಾಗೂ ವಿಜಯಲಕ್ಷ್ಮೀಸಿಂಗ್ ನಿರ್ಮಿಸುತ್ತಿರುವ ರ್ಯಾಸ್ಕಲ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ. ಆದಿತ್ಯ, ಪಲ್ಲವಿ, ಶೋಭರಾಜ್, ರಂಗಾಯಣರಘು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ವಂಶೀ ಛಾಯಾಗ್ರಹಣದಲ್ಲಿ ನಿರ್ದೇಶಕ ಮಾದೇಶ್ ಚಿತ್ರಿಸಿಕೊಂಡರು.
ಚಿತ್ರಕ್ಕೆ ರಮಣಿ ಕಥೆ, ಎಂ.ಎಸ್. ರಮೇಶ್ ಸಂಭಾಷಣೆ, ಈಶ್ವರಿಕುಮಾರ್ ಕಲೆ, ರವಿವರ್ಮ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ರುದ್ರೇಶ್ ನಿರ್ದೇಶನ ಸಹಕಾರ ಇದೆ. ಮಾದೇಶ್ ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.