ADVERTISEMENT

ಹೊಸ ಪ್ರಯೋಗದಲ್ಲಿ ದುಷ್ಟ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

’ದುಷ್ಟ’ ಚಿತ್ರದ ಮಾತುಗಳ ಜೋಡಣೆಗೆ ಎಸ್. ನಾರಾಯಣ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿರುವ 20ಕ್ಕೂ ಹೆಚ್ಚು ಹೊಸ ಕಲಾವಿದರು ಮಳವಳ್ಳಿ, ಮಂಡ್ಯ ಹಾಗೂ ಚಾಮರಾಜನಗರ ಸುತ್ತಮುತ್ತ ಇರುವ ಗ್ರಾಮ್ಯಭಾಷೆಯನ್ನೇ ಬಳಸಲಿದ್ದಾರೆ. ಹಾಗಾಗಿ ಆ ಪ್ರದೇಶಗಳಿಂದಲೇ ಎಂಟ್ಹತ್ತು ಕಂಠದಾನ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರನ್ನು ಬೆಂಗಳೂರಿನ ಡಬ್ಬಿಂಗ್ ಕೋಣೆಗೆ ಕರೆತಂದಿದ್ದಾರೆ ನಿರ್ದೇಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.