ADVERTISEMENT

‘31 DAYS’ Movie: ಯುವ ಮನಸ್ಸುಗಳ ಪ್ರೇಮಕಥೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 23:30 IST
Last Updated 17 ಆಗಸ್ಟ್ 2025, 23:30 IST
ಪ್ರಜ್ವಲಿ ಸುವರ್ಣ
ಪ್ರಜ್ವಲಿ ಸುವರ್ಣ   

ಯುವ ಸಮುದಾಯದ ಪ್ರೇಮಕಥೆಗಳನ್ನು ಹೊಂದಿರುವ ಚಿತ್ರಗಳು ಇತ್ತೀಚೆಗೆ ಹೆಚ್ಚು ಟ್ರೆಂಡ್‌ ಆಗುತ್ತಿವೆ. ಅದೇ ಜಾನರ್‌ನ ‘31 DAYS’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಜ ರವಿಕುಮಾರ್ ನಿರ್ದೇಶನದ ಚಿತ್ರವಿದು. ಜತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್‌ ಸಂಗೀತ ನೀಡಿರುವ 150ನೇ ಚಿತ್ರ. 

ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಚಿತ್ರದ ಟೀಸರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ‘ಜಾಲಿಡೇಸ್’ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿದ್ದು, ಯುವ ನಟಿ ಪ್ರಜ್ವಲಿ ಸುವರ್ಣ ನಾಯಕಿ. ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಹೊಂದಿರುವ ಚಿತ್ರ ಸೆ.5ರಂದು ತೆರೆಗೆ ಬರಲಿದೆ.

‘ಈ ಚಿತ್ರದ ನಾಯಕ ನಿರಂಜನ್ ಶೆಟ್ಟಿ‌ ನನಗೆ ಬಹಳ ವರ್ಷಗಳ ಸ್ನೇಹಿತ. ಇದು ಅವರು ನಾಯಕನಾಗಿ ನಟಿಸಿರುವ 8ನೇ ಚಿತ್ರ ಹಾಗೂ ವಿ.ಮನೋಹರ್ ಅವರು ಸಂಗೀತ ನೀಡಿರುವ 150ನೇ ಚಿತ್ರವೆಂದು ತಿಳಿದು ಬಹಳ ಸಂತೋಷವಾಯಿತು.‌ ಟೀಸರ್ ನೋಡಿದಾಗ ಚಿತ್ರ ಚೆನ್ನಾಗಿದೆ ಎಂಬ ಭರವಸೆ ಮೂಡುತ್ತದೆ. ತಂಡಕ್ಕೆ ಶುಭವಾಗಲಿ’ ಎಂದರು ಸಂತೋಷ್‌ ಲಾಡ್‌. 

ADVERTISEMENT

ನಾಗವೇಣಿ ಎನ್‌. ಶೆಟ್ಟಿ ಬಂಡವಾಳ ಹೂಡಿದ್ದಾರೆ. ವಿನುತ್.ಕೆ ಛಾಯಾಚಿತ್ರಗ್ರಹಣ, ನಿಖಿತ್ ಪೂಜಾರಿ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.