Final destination
ಬೆಂಗಳೂರು: ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವುದಲ್ಲದೇ ಭೀತಿ ಹುಟ್ಟಿಸುವ ಹಾಲಿವುಡ್‌ನ ಫೈನಲ್ ಡೆಸ್ಟಿನೇಷನ್ ಹಾರರ್ ಸಿನಿಮಾ ಸರಣಿಯ ಆರನೇ ಸಿನಿಮಾ Final destination; bloodlines ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರ ಗಮನ ಸೆಳೆದಿದೆ.
ಆದರೆ, ಈ ಸಿನಿಮಾ ಇಂದು ಜಾಗತಿಕವಾಗಿ ಸುದ್ದಿಯಾಗಿದೆ. ಅರ್ಜೆಂಟಿನಾದಲ್ಲಿ ಮಹಿಳೆಯೊಬ್ಬರು ತಮ್ಮ ಮಗಳು ಹಾಗೂ ಸಂಬಂಧಿಕರ ಜೊತೆ ಥಿಯೇಟರ್‌ನಲ್ಲಿ ಈ ಸಿನಿಮಾ ನೋಡುವಾಗ ಥಿಯೇಟರ್ ಛಾವಣಿ (ಸೀಲಿಂಗ್) ಕುಸಿದು ಅವರ ಮೇಲೆ ಬಿದ್ದಿದೆ.
ಆ ಸಿನಿಮಾದಲ್ಲಿ ಘಟಿಸುವಂತ ಸನ್ನಿವೇಶಗಳು ನಿಜವಾಗಿ ಘಟಿಸಿ ಕೆಲಕಾಲ ಚಿತ್ರಮಂದಿರ ಸ್ತಬ್ದವಾಗಿತ್ತು ಎಂದು ವರದಿಗಳು ಹೇಳಿವೆ.
ಮೇ 25 ರಂದು ಅರ್ಜೆಂಟಿನಾದ ಬ್ಯೂನಸ್ ಐರಿಸ್ ರಾಜ್ಯದ ಲಾಲ್ ಪ್ಲಾಟಾ ಎಂಬ ನಗದರಲ್ಲಿ ಫಿಯಾಮಾ ವಿಲ್ಲಾವರ್ಡೆ ಎಂಬ ಮಹಿಳೆ ತಮ್ಮ 11 ವರ್ಷದ ಮಗಳು ಹಾಗೂ ಸಂಬಂಧಿಕರ ಜೊತೆ ಓಚೊ ಸಿನಿಮಾ ಥಿಯೇಟರ್‌ನಲ್ಲಿ Final destination; bloodlines ಸಿನಿಮಾ ವೀಕ್ಷಿಸುತ್ತಿದ್ದರು.
ಈ ವೇಳೆ ಮಳೆಯಿಂದ ಶಿಥಿಲಗೊಂಡಿದ್ದ ಥಿಯೇಟರ್‌ನ ಸೀಲಿಂಗ್ ಕುಸಿದು ಅವರ ಮೊಣಕಾಲಿನ ಮೇಲೆ ಬಿದ್ದಿದೆ. ಫಿಯಾಮಾ ಅವರು ಗಂಭಿರವಾಗಿ ಗಾಯಗೊಂಡಿದ್ದು ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡೇಲಿ ಮೇಲ್ ವರದಿ ಮಾಡಿದೆ.
ಈ ಸಿನಿಮಾವನ್ನು ಜ್ಯಾಕ್ ಲಿಪೊವ್ಸ್ಕಿ ಮತ್ತು ಆಡಮ್ ಸ್ಟೈನ್ ಅವರು ನಿರ್ದೇಶಿಸಿದ್ದು ನ್ಯೂ ಲೈನ್ ಸಿನಿಮಾ ನಿರ್ಮಿಸಿದೆ. ಮೇ 16ರಂದು ಬಿಡುಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.