ADVERTISEMENT

ಆಡುಜೀವಿತಂ: ಒಂದು ಸಿನಿಮಾಕ್ಕಾಗಿ 16 ವರ್ಷ ನೀಡಿದ್ದ ನಟ ಪೃಥ್ವಿರಾಜ್ ಸುಕುಮಾರನ್!

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 23:29 IST
Last Updated 28 ಮಾರ್ಚ್ 2024, 23:29 IST
<div class="paragraphs"><p>ಆಡುಜೀವಿತಂ ಚಿತ್ರದ ಪೋಸ್ಟರ್</p></div>

ಆಡುಜೀವಿತಂ ಚಿತ್ರದ ಪೋಸ್ಟರ್

   

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಬಹುನಿರೀಕ್ಷಿತ ಚಿತ್ರ ‘ಆಡುಜೀವಿತಂ(ಗೋಟ್ ಲೈಫ್)’ ಮಾ.28ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್‌ ಮೂಲಕ ಬಿಡುಗಡೆಯಾಗಿರುವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸ್ಸಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಮಲಾ ಪೌಲ್, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. 

ADVERTISEMENT

ಇದು ಬೆನ್ಯಾಮಿನ್ ಅವರು ಬರೆದಿರುವ ಮಲಯಾಳಂ ಕಾದಂಬರಿ ‘ಆಡುಜೀವಿತಂ’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಬೆನ್ಯಾಮಿನ್ ಬದುಕಿನ ನೈಜ ಕಥೆಯನ್ನು ಹೊಂದಿದೆ. 2008 ರಲ್ಲಿಯೇ ಚಿತ್ರ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇಡೀ ತಂಡ 16 ವರ್ಷಗಳು ಈ ಚಿತ್ರಕ್ಕಾಗಿ ಶ್ರಮಿಸಿದ್ದು ವಿಶೇಷ.

‘ಒಂದು ಸಿನಿಮಾಗೆ 16 ವರ್ಷಗಳನ್ನು ನೀಡುವುದು ಸುಲಭವಲ್ಲ. ಈ ಅವಧಿಯಲ್ಲಿ ಬದುಕಿನಲ್ಲಿ ಏನೆನೆಲ್ಲ ಆಗಿಹೋಗಿದೆ. ಆದಾಗ್ಯೂ ಒಂದು ದಿನವೂ ಈ ಚಿತ್ರದಿಂದ ಹಿಂದೆ ಸರಿಯಬೇಕು ಅನ್ನಿಸಿಲ್ಲ. ಮನಸ್ಸಿನ ಮೂಲೆಯಲ್ಲಿ ಒಂದು ಕಡೆ ಈ ಚಿತ್ರಕ್ಕಾಗಿ ಯೋಚಿಸುತ್ತಿದೆ’ ಎನ್ನುತ್ತಾರೆ ಪೃಥ್ವಿರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.