ADVERTISEMENT

Aamir Khan on Bollywood: ಬಾಲಿವುಡ್‌ ಉತ್ತಮಗೊಳ್ಳಲು ಅವಕಾಶವಿದೆ; ಅಮೀರ್‌ ಖಾನ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 23:02 IST
Last Updated 23 ಏಪ್ರಿಲ್ 2025, 23:02 IST
ಅಮೀರ್‌ ಖಾನ್‌
ಅಮೀರ್‌ ಖಾನ್‌   

ಬಾಲಿವುಡ್‌ ಸಿನಿಮಾಗಳ ಸೋಲಿನ ಕುರಿತು ಅಮೀರ್‌ ಖಾನ್‌ ಮುಕ್ತವಾಗಿ ಮಾತನಾಡಿದ್ದಾರೆ. ಹಿಂದಿ ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಉತ್ತಮವಾಗಿಸಲು ಸಾಕಷ್ಟು ಅವಕಾಶವಿದೆ ಎಂದು ಹೇಳಿದ್ದಾರೆ.

ವಿದೇಶಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು, ಹಾಗಂತ ಇತರ ಚಿತ್ರರಂಗಕ್ಕಿಂತ ಹಿಂದೆ ಇದ್ದೇವೆ, ಈಗ ಕಳಪೆ ಸಿನಿಮಾ ಮಾಡುತ್ತಿದ್ದೇವೆ ಎಂದಲ್ಲ. ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ನಮ್ಮನ್ನು ಉತ್ತಮವಾಗಿಸಿಕೊಳ್ಳಲು ಮತ್ತು ಇತರ ಚಿತ್ರರಂಗಗಳಿಂದ ಕಲಿಯಲು ಸಾಕಷ್ಟು ಅವಕಾಶಗಳಿವೆ. ಸಿನಿಮಾ ನಿರ್ಮಾಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದಿದ್ದಾರೆ.

ತಮ್ಮ ‘ಲಾಲ್‌ಸಿಂಗ್‌ ಚೆಡ್ಡಾ’ ಚಿತ್ರ ಏಕೆ ಜನಮನ್ನಣೆ ಗಳಿಸಲಿಲ್ಲ ಎಂಬ ಕುರಿತು ಅವರು ಅವಲೋಕಿಸಿದ್ದಾರೆ. ‘1970–80ರ ದಶಕಕ್ಕೆ ಹೋಲಿಸಿದರೆ 80–90ರ ದಶಕದ ಸಿನಿಮಾಗಳು ಕಡಿಮೆ ಗುಣಮಟ್ಟ ಹೊಂದಿದ್ದವು. 1990ರ ನಂತರ ಬಾಲಿವುಡ್‌ ಮತ್ತೆ ಚೇತರಿಕೆ ಕಂಡಿತು. 2000 ದಲ್ಲಿ ಪ್ರೇಕ್ಷಕರು ಬದಲಾದರು. ಅಲ್ಲಿಂದ ನಂತರ ಪ್ರೇಕ್ಷಕರು ಮುಕ್ತ ಮನಸಿನವರಾಗಿದ್ದು ಭಿನ್ನ ಕಂಟೆಂಟ್‌ ಸಿನಿಮಾಗಳನ್ನು ಬಯಸುತ್ತಿದ್ದಾರೆ ಎಂದು ಅಮೀರ್‌ ಅಭಿಪ್ರಾಯಪಟ್ಟಿದ್ದಾರೆ. 

ADVERTISEMENT

‘ಸದ್ಯದ ಸ್ಥಿತಿಯಲ್ಲಿ ಬಾಲಿವುಡ್‌ ಚಿತ್ರಗಳು ಉತ್ತಮವಾಗಿಲ್ಲ. ಉತ್ತಮಪಡಿಸಿಕೊಳ್ಳಲು, ಕಲಿಕೆಗೆ ಅವಕಾಶವಿದೆ. ಪ್ರತಿ ಕ್ಷೇತ್ರದಲ್ಲಿಯೂ ಏರಿಳಿತಗಳಿರುತ್ತವೆ. ನಾವೀಗ ಇಳಿಮುಖವಾಗಿದ್ದೇವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇನು ಹೊಸತಲ್ಲ. ಇದೊಂದು ಚಕ್ರವಷ್ಟೆ. ಈ ಹಂತ ದಾಟಿ ಬರುತ್ತೇವೆ. ನನಗೆ ನಂಬಿಕೆ ಇರುವ ಕಥೆಗಳನ್ನು ಸಿನಿಮಾವಾಗಿಸುತ್ತೇನೆ’ ಎಂದವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.