ADVERTISEMENT

ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ಬಾಬ್ರಿ ಮಸೀದಿ: ವಿವಾದಕ್ಕೆ ಗುರಿಯಾಗುವರೇ ಅಮೀರ್?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 7:28 IST
Last Updated 24 ಅಕ್ಟೋಬರ್ 2019, 7:28 IST
ಅಮೀರ್‌ ಖಾನ್‌
ಅಮೀರ್‌ ಖಾನ್‌   

ಮುಂಬೈ: ಬಾಲಿವುಡ್‌ ನಟ ಅಮೀರ್‌ ಖಾನ್‌ ಅಭಿನಯದ 'ಲಾಲ್‌ ಸಿಂಗ್‌ ಛಡ್ಡಾ' ಚಿತ್ರದಲ್ಲಿ ವಿವಾದಿತ ಬಾಬ್ರಿ ಮಸೀದಿ ಕುರಿತು ಚಿತ್ರೀಕರಣ ನಡೆಸಲಿದ್ದು, ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

ಅಮೀರ್‌ ಖಾನ್‌, ಸಿನಿಮಾದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇದು ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌’ ಸಿನಿಮಾದ ರಿಮೇಕ್‌ ಚಿತ್ರವಾಗಿದೆ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಮೀರ್‌ ನಟಿಸುತ್ತಿದ್ದು,ಚಿತ್ರಕ್ಕಾಗಿ ಈಗಾಗಲೇ ಕಠಿಣ ಡಯೆಟ್‌ ಹಾಗೂ ವ್ಯಾಯಾಮದ ಮೂಲಕ 20 ಕೆ.ಜಿ ತೂಕವನ್ನು ಕಳೆದುಕೊಂಡು ಸಣ್ಣಗಾಗಿದ್ದಾರೆ.ಈ ಚಿತ್ರವು ನಾಯಕನ ಜೀವನಪಯಣದ ಕುರಿತಾಗಿದ್ದು, ಹಾಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗುತ್ತದೆ.

ADVERTISEMENT

ದೆಹಲಿ, ಗುಜರಾತ್‌, ಮುಂಬೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಇನ್ನು ಕೆಲ ರಾಜ್ಯಗಳಲ್ಲಿ ಅಮೀರ್‌ ಖಾನ್‌ ತಮ್ಮ ಈ ಸಿನಿಮಾವನ್ನು ಚಿತ್ರೀಕರಿಸಲಿದ್ದಾರೆ.ಈ ಚಿತ್ರಕ್ಕೆ ಅತುಲ್‌ ಕುಲಕರ್ಣಿ ಚಿತ್ರಕತೆ ಬರೆಯುತ್ತಿದ್ದು, ಅದ್ವೈತ್‌ ಚಂದನ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣ ಮಾಡುತ್ತಿರುವುದು ವಯಾಕಾಮ್‌18 ಸ್ಟುಡಿಯೋಸ್‌ ಹಾಗೂ ಅಮೀರ್‌ ಖಾನ್‌ ಪ್ರೊಡಕ್ಷನ್ಸ್‌.

2020ರ ಕ್ರಿಸ್‌ಮಸ್‌ಗೆ ಈ ಚಿತ್ರ ತೆರೆ ಕಾಣಲಿದೆ.

2014ರಲ್ಲಿ ತೆರೆ ಕಂಡಿದ್ದ 'ಪಿಕೆ' ಸಿನಿಮಾ ಕೂಡ ವಿವಾದಕ್ಕೆ ಕಾರಣವಾಗಿತ್ತು. ಹಲವು ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.