ADVERTISEMENT

ಅಭಿಷೇಕ್‌ಗೆ ಅತ್ಯುತ್ತಮ ನಟ ಪ್ರಶಸ್ತಿ: ಅತ್ಯಂತ ಸಂತೋಷವಾಗಿರುವ ತಂದೆ ಎಂದ ಬಿಗ್ ಬಿ

ಪಿಟಿಐ
Published 16 ಆಗಸ್ಟ್ 2025, 9:58 IST
Last Updated 16 ಆಗಸ್ಟ್ 2025, 9:58 IST
   

ನವದೆಹಲಿ: ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಅವರಿಗೆ ‘ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಆಫ್ ಮೆಲ್ಬೋರ್ನ್‌’ನಲ್ಲಿ(ಐಎಫ್‌ಎಫ್‌ಎಮ್‌) ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಅಭಿಷೇಕ್‌ ಬಚ್ಚನ್‌ ಅವರ ‘ಐ ವಾಂಟ್‌ ಟು ಟಾಕ್‌’ ಸಿನಿಮಾದ ನಟನೆಗೆ ಪ್ರಶಸ್ತಿ ಲಭಿಸಿದೆ.

ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯ ನಟ ಅಮಿತಾಭ್‌ ಬಚ್ಚನ್ ಅವರು ‘ಕುಟುಂಬಕ್ಕೆ ಹೆಮ್ಮೆ ಮತ್ತು ಗೌರವ ತಂದಿದ್ದೀಯ’ಎಂದು ಬ್ಲಾಗ್‌ನಲ್ಲಿ ಹೊಗಳಿದ್ದಾರೆ. ಅಭಿಷೇಕ್‌ ಪ್ರಶಸ್ತಿ ಹಿಡಿದುಕೊಂಡಿರುವ ಹಾಗೂ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಕಾಣಿಸಿಕೊಂಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ವಿಶ್ವದಲ್ಲೇ ಅತ್ಯಂತ ಸಂತೋಷವಾಗಿರುವ ತಂದೆ ನಾನು. ಕಠಿಣ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದೀಯ. ಸಮಯ ತೆಗೆದುಕೊಂಡರು, ನೀನು ಅದನ್ನು ಬಿಟ್ಟುಕೊಡಲಿಲ್ಲ. ಒಬ್ಬ ತಂದೆಗೆ ಇದಕ್ಕಿಂತ ದೊಡ್ದ ಉಡುಗೊರೆ ನೀಡಲು ಸಾಧ್ಯವಿಲ್ಲ’ ಎಂದು ಬರೆದಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಅಭಿಷೇಕ್‌ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಳಿಕೊಂಡಾಗ ಕೆಲವರು ಅಪಹಾಸ್ಯ ಮಾಡಿದ್ದರು. ಅವರೆಲ್ಲರಿಗೂ ಗೆಲುವೇ ಉತ್ತರಿಸಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.