ADVERTISEMENT

ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸ್ಥಿರ: ಶೂಟಿಂಗ್‌ಗೆ ಮರಳಿದ ಅಭಿಷೇಕ್ ಬಚ್ಚನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 7:35 IST
Last Updated 26 ಆಗಸ್ಟ್ 2021, 7:35 IST
ಅಭಿಷೇಕ್‌ ಬಚ್ಚನ್
ಅಭಿಷೇಕ್‌ ಬಚ್ಚನ್    

ಮುಂಬೈ: ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇತ್ತೀಚಿಗೆ ಚಿತ್ರೀಕರಣದ ವೇಳೆ ಅಭಿಷೇಕ್‌ ಬಚ್ಚನ್ ಕೈಗೆ ಗಾಯವಾಗಿತ್ತು. ಕೂಡಲೇ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಇದೀಗ ಶಸ್ತ್ರಚಿಕಿತ್ಸೆ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಭಿಷೇಕ್‌, ‘ಚೆನ್ನೈನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್​ ವೇಳೆ ಬುಧವಾರ ಅವಘಡ ನಡೆದಿತ್ತು. ಬಲಗೈಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಕೂಡಲೇ ಮುಂಬೈ ಹೊರಟುಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ಸದ್ಯ ಶಸ್ತ್ರಚಿಕಿತ್ಸೆ ನಡೆದಿದ್ದು, ಎಲ್ಲವೂ ಸರಿ ಹೋಗಿದೆ. ಶೂಟಿಂಗ್​ ಮುಂದುವರಿಸಲು ಈಗ ಮತ್ತೆ ಚೆನ್ನೈಗೆ ಮರಳಿದ್ದೇನೆ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸದ್ಯ ಅಭಿಷೇಕ್ ‘ಬಾಬ್‌ ಬಿಸ್ವಾಸ್‌’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.