ವೇದಿಕೆ ಮೇಲೆ ಪ್ರಾಣ ಬಿಟ್ಟ ನಟ ಅಮರೇಶ್ ಮಹಾಜನ್
ಫೋಟೊ ಕೃಪೆ: ಪಿಟಿಐ
ಹಿಮಾಚಲ ಪ್ರದೇಶ: ಇಲ್ಲಿನ ಚಂಬಾದ ಚೌಗಾನ್ ಮೈದಾನದಲ್ಲಿ ಆಯೋಜಿಸಿದ್ದ ಐತಿಹಾಸಿಕ ಶ್ರೀ ರಾಮಲೀಲಾ ನಾಟಕ ಪ್ರದರ್ಶನದ ವೇಳೆ 'ರಾಜ ದಶರಥ'ನ ಪಾತ್ರ ಮಾಡುತ್ತಿದ್ದ ನಟ ಅಮರೇಶ್ ಮಹಾಜನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
70 ವರ್ಷದ ನಟ ಅಮರೇಶ್ ಮಹಾಜನ್ ಹಿಮಾಚಲ ಪ್ರದೇಶದಲ್ಲಿ ‘ಶಿಬು‘ ಎಂದೇ ಪ್ರಸಿದ್ಧರಾಗಿದ್ದರು. ಅವರು ನಾಟಕ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಅವರು ಕುಸಿದು ಬೀಳುತ್ತಿದ್ದಂತೆ ವೇದಿಕೆಯಲ್ಲಿ ಗದ್ದಲ ಉಂಟಾಗುತ್ತದೆ. ಕೂಡಲೆ ಕಾರ್ಯಕ್ರಮದ ಆಯೋಜಕರು ಪರದೆಯನ್ನು ತೆಗೆದು ಹಾಕಿ, ಅವರನ್ನು ಪಂಡಿತ್ ಜವಾಹರ್ ಲಾಲ್ ನೆಹರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.