ADVERTISEMENT

ನಟ ಜಾನ್‌ ಅಬ್ರಾಹಂ, ಪತ್ನಿ ಪ್ರಿಯಾ ರುಂಚಾಲ್‌ಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 6:45 IST
Last Updated 3 ಜನವರಿ 2022, 6:45 IST
ಜಾನ್‌ ಅಬ್ರಾಹಂ, ಪ್ರಿಯಾ ರುಂಚಾಲ್‌
ಜಾನ್‌ ಅಬ್ರಾಹಂ, ಪ್ರಿಯಾ ರುಂಚಾಲ್‌   

ಮುಂಬೈ: ಬಾಲಿವುಡ್‌ ಸ್ಟಾರ್‌ ನಟ ಜಾನ್‌ ಅಬ್ರಾಹಂ ಹಾಗೂ ಪತ್ನಿ ಪ್ರಿಯಾ ರುಂಚಾಲ್‌ ಅವರಿಗೆ ಕೋವಿಡ್‌ ದೃಢಪಟ್ಟಿರುವುದು ವರದಿಯಾಗಿದೆ.

ಕೋವಿಡ್‌ ದೃಢಪಟ್ಟಿರುವ ಬಗ್ಗೆ ಜಾನ್‌ ಅಬ್ರಾಹಂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಾರೆ.

ಸೋಮವಾರ ಪರೀಕ್ಷೆಯ ವರದಿ ಬಂದಿದ್ದು ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಇಬ್ಬರೂ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದೇವೆ ಎಂದುಹೇಳಿದ್ದಾರೆ.

ADVERTISEMENT

ನಮಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದು ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ನಾವು ಎರಡು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದೇವೆ ಎಂದು ಜಾನ್‌ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ನಮ್ಮ ಸಂಪರ್ಕಕ್ಕೆ ಬಂದವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಅಂತರ ಕಪಾಡಿಕೊಂಡು, ಮಾಸ್ಕ್‌ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.