ADVERTISEMENT

ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ: ಮೌನ ಮುರಿದ ನಟ ಚಿರಂಜೀವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2023, 10:08 IST
Last Updated 21 ನವೆಂಬರ್ 2023, 10:08 IST
<div class="paragraphs"><p>ನಟ ಚಿರಂಜೀವಿ</p></div>

ನಟ ಚಿರಂಜೀವಿ

   

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್  ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಮೆಗಾಸ್ಟಾರ್‌ ಚಿರಂಜೀವಿ ಖಂಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ತ್ರಿಷಾ ಬಗ್ಗೆ ಮನ್ಸೂರ್ ಅಲಿ ಖಾನ್ ನೀಡಿರುವ ಹೇಳಿಕೆಗಳು ಖಂಡನೀಯ. ಕಲಾವಿದರಿಗೆ ಮಾತ್ರವಲ್ಲದೇ, ಮಹಿಳೆರಿಗೆ ಅಥವಾ ಹೆಣ್ಣುಮಕ್ಕಳಿಗೆ ಈ ರೀತಿಯ ಅಸಹ್ಯಕರ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ವಿಕೃತಿಯ ಮನಸ್ಥಿತಿ ಹೊಂದಿರುವವರು ಬಳಸುವ ಪದಗಳು. ಇಂತಹ ಹೇಳಿಕೆಗಳನ್ನು ವಿರೋಧಿಸಬೇಕು. ಇಂತಹ ಸಮಯದಲ್ಲಿ ನಾನು ತ್ರಿಷಾ ಅವರ ಪರ ನಿಲ್ಲುತ್ತೇನೆ‘. ಎಂದರು

ADVERTISEMENT

‘ಕಲಾವಿದರಿಗೆ ಆಗುವ ಅನ್ಯಾಯವನ್ನು ವಿರೋಧಿಸುವ ಜತೆಗೆ ನಿಂದನಾತ್ಮಕ ಹೇಳಿಕೆಗಳಿಗೆ ಗುರಿಪಡಿಸುವ ಪ್ರತಿಯೊಬ್ಬ ಮಹಿಳೆಯರ ಪರ ನನ್ನ ಧ್ವನಿ ಇರಲಿದೆ‘ ಎಂದು ಚಿರಂಜೀವಿ ಹೇಳಿದ್ದಾರೆ.

ಇತ್ತೀಚೆಗೆ ಟಿ.ವಿ ಮಾಧ್ಯಮಯೊಂದಕ್ಕೆ ಸಂದರ್ಶನ ನೀಡಿದ ಮನ್ಸೂರ್ ಅಲಿ ಖಾನ್ ಅವರು ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಚಿತ್ರದ ನಾಯಕಿ ತ್ರಿಶಾ ಎಂದು ತಿಳಿದಾಗ ಸಂತೋಷವಾಗಿತ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್‌ ಅಥವಾ ಬೆಡ್​ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ಲಿಯೋ ಸಿನಿಮಾದವರು ಚಿತ್ರೀಕರಣದುದ್ದಕ್ಕೂ ತ್ರೀಶಾ ಅವರ ಮುಖವನ್ನೇ ನನಗೆ ತೋರಿಸಲಿಲ್ಲ ಎಂದು ಹೇಳಿದ್ದರು.

ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್​​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.