ADVERTISEMENT

ವಾರಾಣಸಿ: ಗಂಗಾ ಆರತಿಯಲ್ಲಿ ಭಾಗಿಯಾದ ನಟಿ ಸನ್ನಿ ಲಿಯೋನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2023, 6:59 IST
Last Updated 17 ನವೆಂಬರ್ 2023, 6:59 IST
<div class="paragraphs"><p>ಸನ್ನಿ ಲಿಯೋನ್‌</p></div>

ಸನ್ನಿ ಲಿಯೋನ್‌

   

ಪಿಟಿಐ ಚಿತ್ರ

ವಾರಾಣಸಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಉತ್ತರ ಪ್ರದೇಶದ ವಾರಾಣಸಿಗೆ ತೆರಳಿ ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ಗುಲಾಬಿ ಬಣ್ಣದ ಅನಾರ್ಕಲಿ ಧರಿಸಿರುವ ನಟಿ ಧಾರ್ಮಿಕ ವಿಧಿವಿಧಾನಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಸನ್ನಿ ಲಿಯೋನ್ ಜತೆ ನಟ ಅಭಿಷೇಕ್ ಸಿಂಗ್ ಕೂಡ ಕಾಣಿಸಿಕೊಂಡಿದ್ದಾರೆ.

ಸದ್ಯ ಇಬ್ಬರೂ ಹೊಸದಾಗಿ ಬಿಡುಗಡೆಯಾದ ಮ್ಯೂಸಿಕ್‌ ಆಲ್ಬಮ್‌ ‘ಥರ್ಡ್ ಪಾರ್ಟಿ’ಯ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಸನ್ನಿ ಲಿಯೋನ್ ತಮ್ಮ ವಾರಾಣಸಿ ಪ್ರವಾಸದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ವಾರಾಣಸಿಯಲ್ಲಿ ಅತ್ಯಂತ ಅದ್ಭುತವಾದ ಅನುಭವವೆಂದರೆ ಗಂಗಾ ಆರತಿಯನ್ನು ನೋಡುವುದು. ಧನ್ಯವಾದಗಳು!!’ ಎಂದು ಬರೆದುಕೊಂಡು, ಅಭಿಷೇಕ್ ಸಿಂಗ್ ಮತ್ತು ಟಿ– ಸೀರೀಸ್ ಅನ್ನು ಟ್ಯಾಗ್‌ ಮಾಡಿದ್ದಾರೆ.

ನವೆಂಬರ್ 15 ರಂದು ‘ಥರ್ಡ್ ಪಾರ್ಟಿ’ ಹಾಡು ಬಿಡುಗಡೆಯಾಗಿದ್ದು, ಸನ್ನಿ ಸಖತ್ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಥರ್ಡ್‌ ಪಾರ್ಟಿ ಹಾಡನ್ನು ಅಭಿಷೇಕ್ ಸಿಂಗ್ ಸಂಯೋಜಿಸಿ, ಹಾಡಿದ್ದಾರೆ. ಅಲ್ಲದೆ ಅವರೇ ಸಾಹಿತ್ಯವನ್ನೂ ಬರೆದಿದ್ದಾರೆ. 

ಸನ್ನಿ ವಾರಾಣಸಿ ಭೇಟಿ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.