ADVERTISEMENT

ನಿಶ್ಚಿತಾರ್ಥ ಖಚಿತಪಡಿಸಿದ ನಟಿ ಅದಿತಿ ಪ್ರಭುದೇವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 5:26 IST
Last Updated 28 ಡಿಸೆಂಬರ್ 2021, 5:26 IST
ಅದಿತಿ ಪ್ರಭುದೇವ
ಅದಿತಿ ಪ್ರಭುದೇವ   

ಬೆಂಗಳೂರು: ಚಂದನವನದ ಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಸೋಮವಾರ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇನ್‌ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ವಿಷಯವನ್ನು ಖಚಿತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ದಾವಣಗೆರೆ ಮೂಲದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರ ಜತೆಯಲ್ಲಿ ‘ಒಂದು ಕನಸಿನಂತೆ ಈ ಕನಸು ನಿಜವಾಗಿದೆ’ ಎಂದು ಬರೆದಿದ್ದಾರೆ. ಹಾಗೆ ಹ್ಯಾಶ್‌ಟ್ಯಾಗ್‌ ಹಾಕಿ ಎಂಗೆಜ್ಡ್‌ಎಂದು ಬರೆದುಕೊಂಡಿದ್ದಾರೆ.

ADVERTISEMENT

ಅಭಿಮಾನಿಗಳು ಸೇರಿದಂತೆ ಸಿನಿಮಾ,ಕಿರುತೆರೆಯ ಗಣ್ಯರು, ಆಪ್ತರು, ಗೆಳೆಯರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಭಾನುವಾರ (ಡಿಸೆಂಬರ್​ 26) ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹುಡುಗ ದಾವಣಗೆರೆ ಮೂಲದವರು ಎನ್ನಲಾಗಿದೆ.

ಇತ್ತೀಚೆಗೆ ಅದಿತಿ ನಟನೆಯ ‘ಆನ’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಅವರ ಇನ್ನು ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.