ADVERTISEMENT

ಕೆಲವನ್ನು ತೋರಿಸಿ, ಕೆಲವನ್ನು ಅಡಗಿಸಿ ಎಂದ ಅಧ್ಯಕ್ಷ ಚಿತ್ರದ ನಟಿ ಹೆಬಾ ಪಟೇಲ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 9:13 IST
Last Updated 11 ಜೂನ್ 2021, 9:13 IST
ಹೆಬಾ ಪಟೇಲ್
ಹೆಬಾ ಪಟೇಲ್   

ಬೆಂಗಳೂರು: ಬೋಲ್ಡ್ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ಎಂದು ಅಡಿಬರಹ ನೀಡುವ ಮೂಲಕ ನೋಡುಗರ ಹುಬ್ಬೇರಿಸಿದ್ದಾರೆ ಹೆಬಾಪಟೇಲ್!

ಕನ್ನಡದಲ್ಲಿ ಜನಪ್ರಿಯತೆ ಗಳಿಸಿದ್ದ ಅಧ್ಯಕ್ಷ ಚಿತ್ರದಲ್ಲಿ ನಟ ಶರಣ್‌ಗೆ ನಾಯಕಿಯಾಗಿ ನಟಿಸಿದ್ದ ಹೈದರಾಬಾದ್ ಮೂಲದ ಹೆಬಾ ಪಟೇಲ್, ಲಾಕ್‌ಡೌನ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳು ಮತ್ತು ಚಿತ್ರರಂಗದ ನಟ-ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಜನರೊಡನೆ ಸಂಪರ್ಕದಲ್ಲಿರುತ್ತಾರೆ.

ADVERTISEMENT

ಅದೇ ರೀತಿಯಲ್ಲಿ ಹೆಬಾ ಕೂಡ, ಫೋಟೊ ಪೋಸ್ಟ್ ಮಾಡಿದ್ದು, ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಲ್ಲದೆ, ಅಭಿಮಾನಿಗಳು ಕಮೆಂಟ್ ಮೂಲಕ ನಟಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಮತ್ತೊಂದು ಫೋಟೊದಲ್ಲಿ ನಟಿ, ಉಡುಗೆಯನ್ನು ಕಡಿಮೆ ಮಾಡಿದ್ದೇನೆ ಮತ್ತು ಹೊರಗೆ ಹೋಗುವುದನ್ನು ಕೂಡ ಕಡಿಮೆ ಮಾಡಿದ್ದೇನೆ ಎನ್ನುವ ಮೂಲಕ ಒಗಟಿನ ರೀತಿಯಲ್ಲಿ ಅಡಿಬರಹ ನೀಡಿ ಬೋಲ್ಡ್ ಚಿತ್ರವನ್ನು ಪೋಸ್ಟ್ ಮಾಡಿ, ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.