ADVERTISEMENT

ಸದ್ದಿಲ್ಲದೇ ಮದುವೆಯಾದರೇ ರಾಕ್‌ಸ್ಟಾರ್ ಖ್ಯಾತಿಯ ಬಾಲಿವುಡ್ ನಟಿ ನರ್ಗಿಸ್ ಫಕ್ರಿ?

ಅಮೆರಿಕನ್ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರು ಮದುವೆಯಾಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ನಟಿ ಈ ವಿಷಯವನ್ನು ಖಚಿತಪಡಿಸಿಲ್ಲ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2025, 2:41 IST
Last Updated 22 ಫೆಬ್ರುವರಿ 2025, 2:41 IST
<div class="paragraphs"><p>ನರ್ಗಿಸ್ ಫಕ್ರಿ</p></div>

ನರ್ಗಿಸ್ ಫಕ್ರಿ

   

ಬೆಂಗಳೂರು: ಅಮೆರಿಕನ್ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರು ಮದುವೆಯಾಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ನಟಿ ಈ ವಿಷಯವನ್ನು ಖಚಿತಪಡಿಸಿಲ್ಲ.

ಅಮೆರಿಕದ ಉದ್ಯಮಿ ಟೋನಿ ಬಿಯಿಗ್ ಎನ್ನುವರನ್ನು ನರ್ಗಿಸ್ ಮದುವೆಯಾಗಿದ್ದು, ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎಂದು ತಿಳಿಸಿವೆ.

ADVERTISEMENT

ಸದ್ಯ ಈ ಜೋಡಿ ವಿವಾಹದ ನಂತರ ಸ್ವಿಟ್ಜರ್‌ಲ್ಯಾಂಡ್‌ಗೆ ಹನಿಮೂನ್‌ಗೆ ತೆರಳಿದೆ ಎಂದು ತಿಳಿದು ಬಂದಿದೆ. ಅಮೆರಿಕದಲ್ಲಿ ಇತ್ತೀಚೆಗೆ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ ಎನ್ನಲಾಗಿದೆ. ನರ್ಗಿಸ್ ಅವರ ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಣಭೀರ್ ಕಪೂರ್ ನಟನೆಯ ‘ರಾಕ್‌ಸ್ಟಾರ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದ್ದ 45 ವರ್ಷದ ಚೆಲುವೆ ನರ್ಗಿಸ್ ಫಕ್ರಿ ಹಾಲಿವುಡ್, ಬಾಲಿವುಡ್ ಸೇರಿದಂತೆ 15 ಕ್ಕೂ ಹೆಚ್ಚು ಸಿನಿಮಾ, ಒಂದು ವೆಬ್ ಸಿರೀಸ್ ಹಾಗೂ ಹಲವಾರು ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ರಾಕ್‌ಸ್ಟಾರ್’ ಹಾಗೂ ‘ಮದ್ರಾಸ್ ಕೆಫೆ’ ನರ್ಗಿಸ್ ಅವರಿಗೆ ಬಾಲಿವುಡ್‌ನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ನರ್ಗಿಸ್ ಫಕ್ರಿ ಅವರ ತಂದೆ ಪಾಕಿಸ್ತಾನ ಮೂಲದವರು. ತಾಯಿ ಜೆಕ್ ಗಣರಾಜ್ಯದವರು. ತಂದೆ ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ನರ್ಗಿಸ್ 6ವರ್ಷದವಳಿದ್ದಾಗಲೇ ಅವರ ತಂದೆ–ತಾಯಿ ಬೇರೆ ಬೇರೆಯಾಗಿದ್ದರು. ಅವರ ಅಕ್ಕ ಆಲಿಯಾ ಫಕ್ರಿ ಎನ್ನುವರು ನ್ಯೂಯಾರ್ಕ್‌ನಲ್ಲಿ ಜೋಡಿ ಕೊಲೆ ಆರೋಪದ ಮೇಲೆ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದಾರೆ.

ಸದ್ಯ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‍ಪವನ್ ಕಲ್ಯಾಣ್ ಅವರ ‘ಹರಿಹರ ವೀರಮಲ್ಲು’ ಸಿನಿಮಾದಲ್ಲಿ ಹಾಗೂ ಬಾಲಿವುಡ್‌ನ ‘ಹೌಸ್‌ಫುಲ್ 5’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.