ADVERTISEMENT

ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 6:29 IST
Last Updated 11 ಏಪ್ರಿಲ್ 2022, 6:29 IST
ಪ್ರಣೀತಾ
ಪ್ರಣೀತಾ   

ವರ್ಷದ ಹಿಂದೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪ್ರಣೀತಾ ತಾಯಿಯಾಗುತ್ತಿದ್ದಾರೆ.

ತಾವು ಗರ್ಭಿಣಿಯಾಗಿರುವ ಕುರಿತು ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಪ್ರಣೀತಾ, ‘ಪತಿಯ 34ನೇ ಜನ್ಮದಿನಕ್ಕೆ ಏಂಜಲ್‌ಗಳು ನಮಗೆ ನೀಡಿದ ಕೊಡುಗೆ’ ಎಂದು ಉಲ್ಲೇಖಿಸಿದ್ದಾರೆ.

ಮದುವೆ ಚಿತ್ರ

ಪ್ರಣೀತಾ ಪೋಸ್ಟ್‌ಗೆ ಸಾವಿರಾರು ಜನರು ಲೈಕ್ಸ್‌ ನೀಡಿ ಶುಭಾಶಯ ಕೋರಿದ್ದಾರೆ. ‘ಪೊರ್ಕಿ’ ಚಿತ್ರದ ಮುಖಾಂತರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ನಾಯಕಿಯಾಗಿ ಪ್ರಣೀತಾ ಚಂದನವನಕ್ಕೆ ಕಾಲಿಟ್ಟಿದ್ದರು.

ADVERTISEMENT

2021ರ ಮೇ 30ರಂದುಉದ್ಯಮಿ ನಿತಿನ್ ರಾಜು ಅವರ ಜೊತೆ ಪ್ರಣೀತಾ ಮದುವೆ ನಡೆದಿತ್ತು. ಬೆಂಗಳೂರು ಹೊರವಲಯದಲ್ಲಿನ ರೆಸಾರ್ಟ್‌ ಒಂದರಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಕುಟುಂಬದ ಆಪ್ತರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗವಹಿಸಿದ್ದರು.

ಚಂದನವನದಲ್ಲಿ ತಮ್ಮ ಬಣ್ಣದ ಲೋಕದ ಪಯಣ ಆರಂಭಿಸಿದ್ದ ಪ್ರಣೀತಾ, ನಂತರದಲ್ಲಿ ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಮಿಂಚಿದ್ದರು. ಪವನ್‌ ಕಲ್ಯಾಣ್ ಅವರ ಜೊತೆ ನಟಿಸಿದ ‘ಅತ್ತಾರೆಂಟಿಕಿ ದಾರೇದಿ’ ಪ್ರಣೀತಾಗೆ ಮತ್ತಷ್ಟು ಖ್ಯಾತಿ ತಂದಿತ್ತು.

ಕನ್ನಡದಲ್ಲಿ ‘ಜರಾಸಂಧ’, ‘ಬ್ರಹ್ಮ’, ‘ಭೀಮಾ ತೀರದಲ್ಲಿ’, ‘ಮಾಸ್‌ ಲೀಡರ್‌’ ಮುಂತಾದವು ಪ್ರಣೀತಾ ನಟನೆಯ ಪ್ರಮುಖ ಚಿತ್ರಗಳು. ಇತ್ತೀಚೆಗೆ ಬಾಲಿವುಡ್‌ಗೂ ಕಾಲಿಟ್ಟಿದ್ದ ಪ್ರಣೀತಾ, ‘ಹಂಗಾಮ–2’ ಹಾಗೂ ಅಜಯ್‌ ದೇವ್‌ಗನ್‌ ನಟನೆಯ ‘ಭುಜ್‌–ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.