ADVERTISEMENT

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪತಿ ತರುಣ್ ಸುಧೀರ್ ಜತೆ ಸುಂದರ ಕ್ಷಣ ಕಳೆದ ನಟಿ ಸೋನಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2025, 7:49 IST
Last Updated 13 ಡಿಸೆಂಬರ್ 2025, 7:49 IST
<div class="paragraphs"><p>ಚಿತ್ರಕೃಪೆ:&nbsp;<strong><a href="https://www.instagram.com/sonal_monteiro_official/?hl=en">sonal_monteiro_official</a></strong></p></div>

ಚಿತ್ರಕೃಪೆ: sonal_monteiro_official

   

ನಟಿ ಸೋನಲ್ ಅವರು ಪತಿ ತರುಣ್ ಸುಧೀರ್ ಜತೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2024ರ ಆ. 11ರಂದು ನಟಿ ಸೋನಲ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಿಡುವಿನ ವೇಳೆಯಲ್ಲಿ ಈ ಜೋಡಿ ವಿದೇಶ ಪ್ರವಾಸಕ್ಕೆ ಹೋಗುತ್ತಿರುತ್ತಾರೆ.

ADVERTISEMENT

ತರುಣ್ ಸುಧೀರ್ ನಟ, ಬರಹಗಾರ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ನಿರ್ದೇಶನದ ದರ್ಶನ್ ನಟನೆಯ ‘ಕಾಟೇರ’ ಚಿತ್ರವು ಪ್ರೇಕ್ಷಕರ ಗಮನ ಸೆಳೆಯಿತು. ‘ಚೌಕ’, ‘ಏಳುಮಲೆ’ ಸೇರಿದಂತೆ ಅನೇಕ ಚಿತ್ರಗಳನ್ನು ಇವರು ಚಿತ್ರರಂಗಕ್ಕೆ ನೀಡಿದ್ದಾರೆ. ಅಷ್ಟೆ ಅಲ್ಲದೆ, ಇವರ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ಪತ್ನಿ ಸೋನಲ್ ನಟಿಸಿದ್ದಾರೆ.

ನಟಿ ಸೋನಲ್ ಅವರು ‘ಬನಾರಸ್‘, ‘ಗರಡಿ’, ಪ್ರೇಮಕಥೆಯನ್ನು ಹೊಂದಿರುವ 'ಲವ್ ಮ್ಯಾಟ್ರು' ಹಾಗೂ ಇತ್ತಿಚೇಗೆ ವಿನೋದ್‌ ಪ್ರಭಾಕರ್‌ ಜತೆ ‘ಮಾದೇವ’ ಚಿತ್ರದಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.