ADVERTISEMENT

ಟ್ರೈಲರ್ ಕಿಂಡಿಯಲ್ಲಿ ಆದಿಪುರಾಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 11:14 IST
Last Updated 25 ಜೂನ್ 2018, 11:14 IST
ಮೋಹನ್ ಕಾಮಾಕ್ಷಿ
ಮೋಹನ್ ಕಾಮಾಕ್ಷಿ   

ಮೋಹನ್ ಕಾಮಾಕ್ಷಿ ನಿರ್ದೇಶನದ ‘ಆದಿ ಪುರಾಣ’ ಚಿತ್ರದ ಟ್ರೈಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಟ್ರೈಲರ್ ಪ್ರದರ್ಶಿಸಿದ ನಂತರ ಮಾತಾಡಿದ ಮೋಹನ್, ‘ಚಿತ್ರ ಈಗ ಸೆನ್ಸಾರ್ ಅಂಗಳದಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ಸ್ಪೂರ್ತಿ ಕಾಶಿನಾಥ್. ಈಗ ಚಿತ್ರ ಪೂರ್ಣಗೊಂಡಿದೆ. ಆದರೆ ಇದನ್ನು ನೋಡಲು ಅವರೇ ಇಲ್ಲ. ಅವರ ಆಶೀರ್ವಾದ ನಮ್ಮ ಮೇಲಿದೆ ಎಂದು ನಂಬಿದ್ದೇವೆ’ ಎಂದರು.

ಆದಿತ್ಯ ಎಂಬ ಹುಡುಗನ ಹದಿಹರೆಯದ ದಿನಗಳ ತುಮುಲಗಳು, ಗೃಹಸ್ಥಾಶ್ರಮದ ಗೊಂದಲಗಳನ್ನು ಇಟ್ಟುಕೊಂಡೇ ಈ ಸಿನಿಮಾ ತಯಾರಾಗಿದೆ ಎಂಬುದಕ್ಕೆ ಟ್ರೈಲರ್‌ನಲ್ಲೇ ಸೂಚನೆ ಇದೆ.

ನಾಯಕ ಶಶಾಂಕ್ ಈ ಚಿತ್ರದಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರಂತೆ. ‘ಈ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿರುವ ಕಳೆದ ಒಂದು ವರ್ಷ ನನ್ನ ಬದುಕಿನ ಅವಿಸ್ಮರಣೀಯ ಗಳಿಗೆ’ ಎಂದರು.

ADVERTISEMENT

‘ಪ್ರೀತಿ ಕಿತಾಬು’ ಎಂಬ ಸಿನಿಮಾಕ್ಕೆ ಮೋಹನ್ ಸಂಕಲನಕಾರರಾಗಿದ್ದರು. ಆಗಲೇ ಶಶಾಂಕ್ ಅವರನ್ನು ನೋಡಿ ಅವರ ಕಥೆಗೆ ನಾಯಕನನ್ನಾಗಿ ಆಯ್ಕೆ ಮಾಡಿದ್ದರಂತೆ.

ಮೋಕ್ಷಾ ಕುಶಾಲ್ ಮತ್ತು ಅಹಲ್ಯಾ ಇಬ್ಬರು ಈ ಚಿತ್ರದ ನಾಯಕಿಯರು. ಅಹಲ್ಯಾ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಮೋಕ್ಷಾ ಕುಶಾಲ್ ‘ನಾನು ದಿಶಾ ಎನ್ನುವ ಪಾತ್ರದಲ್ಲಿ ನಟಿಸಿದ್ದೇನೆ. ಐಟಿ ತಂಡ ಮುಖ್ಯಸ್ಥೆ. ಬೋಲ್ಡ್‌ ಆಗಿರುತ್ತಾಳೆ. ಪ್ರೀತಿಯಲ್ಲಿ ನಂಬಿಕೆ ಇರುವುದಿಲ್ಲ. ಅಂಥವಳು ಪ್ರೀತಿಗೆ ಬಿದ್ದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದರು.

ವತ್ಸಲಾ ಮೋಹನ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಬಹಳ ಆಪ್ತವಾಗಿ ತೊಡಗಿಸಿಕೊಂಡಿದ್ದೇನೆ. ನಾಯಕನ ತಾಯಿಯ ಪಾತ್ರ ನನ್ನದು’ ಎಂದರು.

ಟ್ರೈಲರ್ ವೀಕ್ಷಿಸಲು ಕೊಂಡಿ:https://www.youtube.com/watch?v=P6kdWD9qONc

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.