ADVERTISEMENT

ಚಿತ್ರಮಂದಿರಗಳಿಗೆ ಸವಾಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ಆದಿತ್ಯ ಧರ್
ಆದಿತ್ಯ ಧರ್   

‘ಕೊರೊನಾ ಮಾರಿಯ ಸಮಸ್ಯೆ ನಿವಾರಣೆಯಾದ ಬಳಿಕ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ’ ಎಂದು ನಿರ್ದೇಶಕ ಆದಿತ್ಯ ಧರ್ ಹೇಳಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಜನರು ಒಟಿಟಿ ವೇದಿಕೆಗಳತ್ತ ಹೆಚ್ಚು ಆಕರ್ಷಿತರಾಗಿರುವುದೇ ಅವರು ಈ ಆತಂಕವ್ಯಕ್ತಪಡಿಸಲು ಮೂಲ ಕಾರಣ.

ಕೊರೊನಾದಿಂದಾಗಿ ಹೊಸ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಹಲವು ಚಿತ್ರಗಳ ಚಿತ್ರೀಕರಣವೂ ಸ್ಥಗಿತಗೊಂಡಿದೆ. ಇದು ಇಡೀ ಉದ್ಯಮದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ.

‘ರಾಷ್ಟ್ರದಾದ್ಯಂತ ಇರುವ ಲಾಕ್‌ಡೌನ್‌ ಪರಿಣಾಮವಾಗಿ ಜನರು ಸಿನಿಮಾಗಳನ್ನು ವೀಕ್ಷಿಸುವ ವಿಧಾನದಲ್ಲಿ ಬದಲಾವಣೆಯಾಗಿದೆ. ಈಗ ಜನರು ಡಿಜಿಟಲ್‌ ಮಾಧ್ಯಮದ ಮೂಲಕ ವೆಬ್ ಸರಣಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಎಲ್ಲವೂ ಸರಿಹೋದ ನಂತರ ಅವರು ಪುನಃ ಚಿತ್ರಮಂದಿರಗಳತ್ತ ಬರಬೇಕು ಎಂದಾದರೆ ಹೊಸ ಸಿನಿಮಾಗಳ ಬಿಡುಗಡೆಯನ್ನು ಅದ್ದೂರಿಯಾಗಿ ಮಾಡುವತ್ತಲೂ ನಾವು ಗಮನ ನೀಡಬೇಕು’ ಎನ್ನುತ್ತಾರೆ ‘ಉರಿ’ ಚಿತ್ರದ ನಿರ್ದೇಶಕ ಆದಿತ್ಯ ಧರ್.

ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ಅವರು ತಮ್ಮ ಮುಂದಿನ ಸಿನಿಮಾ ‘ಅಶ್ವತ್ಥಾಮ’ದ ಸಿದ್ಧತೆಯನ್ನು ಆರಂಭಿಸಿದ್ದಾರೆ. ಇದರಲ್ಲಿ ವಿಕ್ಕಿ ಕೌಶಲ್ ಅವರು ನಟಿಸಲಿದ್ದಾರೆ. ವೆಬ್ ಸರಣಿಗಳು, ಸಿನಿಮಾಗಳು ಹಾಗೂ ಕಿರುಚಿತ್ರಗಳಿಗೆ ಸೂಕ್ತವಾಗುವ 10ರಿಂದ 12 ಸ್ಕ್ರಿಪ್ಟ್‌ಗಳು ಅವರಲ್ಲಿ ಸಿದ್ಧವಾಗಿಯಂತೆ. ‘ಪರಿಸ್ಥಿತಿಯು ನಾನು ಅಂದುಕೊಂಡಂತೆ ಇಲ್ಲದಿದ್ದಾಗಲೆಲ್ಲ ಬರವಣಿಗೆಯತ್ತ ಮುಖ ಮಾಡುತ್ತೇನೆ. ಬರವಣಿಗೆ ಎಂಬುದು ಯಾವಾಗಲೂ ನನ್ನ ಪಾಲಿನ ರಕ್ಷಕ ಇದ್ದಂತೆ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.