ADVERTISEMENT

'Animal' ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ

ಪಿಟಿಐ
Published 25 ನವೆಂಬರ್ 2023, 13:34 IST
Last Updated 25 ನವೆಂಬರ್ 2023, 13:34 IST
<div class="paragraphs"><p>ರಣಬೀರ್ ಕಪೂರ್</p></div>

ರಣಬೀರ್ ಕಪೂರ್

   

(ಚಿತ್ರ ಕೃಪೆ– Instagram/@animalthefilm)

ಮುಂಬೈ: ಬಾಲಿವುಡ್‌ ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಚಿತ್ರ ಡಿ.1 ರಂದು ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಟಿ-ಸೀರೀಸ್ ಪ್ರೊಡಕ್ಷನ್ ಹೌಸ್ ಇಂದಿನಿಂದ (ಶನಿವಾರ) ಮುಂಗಡ ಬುಕಿಂಗ್ ಅನ್ನು ಆರಂಭಿಸಿದೆ.

ADVERTISEMENT

'ಅನಿಮಲ್ ಮುಂಗಡ ಬುಕಿಂಗ್ ಈಗ ಆರಂಭವಾಗಿದೆ' ಎಂದು ಚಿತ್ರ ತಂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಣಬೀರ್, ರಶ್ಮಿಕಾ, ಅನಿಲ್ ಕಪೂರ್ ಮತ್ತು ಬಾಬಿ ದೆವೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಿ-ಸೀರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದ ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿ 5 ಭಾಷೆಗಳಲ್ಲಿ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.