ADVERTISEMENT

ನಿರ್ಮಾಪಕ ಕರೀಂ ಮೊರಾನಿಗೆ ಕೊರೊನಾ ಸೋಂಕು

ಪಿಟಿಐ
Published 8 ಏಪ್ರಿಲ್ 2020, 20:15 IST
Last Updated 8 ಏಪ್ರಿಲ್ 2020, 20:15 IST
ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ
ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ   

ಮುಂಬೈ: ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ ಅವರಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

‘ಕರೀಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪತ್ನಿ ಮತ್ತು ಇತರ ಸಿಬ್ಬಂದಿಯ ಪರೀಕ್ಷೆ ನಡೆಸಿದ್ದು, ಸೋಂಕು ತಗುಲಿಲ್ಲ’ ಎಂದು ಕರೀಂ ಸಹೋದರ ಮೊಹಮ್ಮದ್ ಮೊರಾನಿ’ ತಿಳಿಸಿದ್ದಾರೆ.

ಕರೀಂ ಮೊರಾನಿ ಅವರ ಇಬ್ಬರು ಪುತ್ರಿಯರಿಗೆ ಕೊರೊನಾ ಸೋಂಕು ಇರುವುದು ಈಗಾಗಲೇ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.