ADVERTISEMENT

ಐರಾ ಸಿನಿಮಾ: ದ್ವಿಪಾತ್ರದಲ್ಲಿ ನಯನತಾರಾ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 11:35 IST
Last Updated 26 ಮಾರ್ಚ್ 2019, 11:35 IST
ನಯನತಾರಾ
ನಯನತಾರಾ   

ಮಾರ್ಚ್ 28ರಂದು ತೆರೆಕಾಣಲಿರುವ ತಮಿಳು ಸಿನಿಮಾ ‘ಐರಾ‘ದಲ್ಲಿ ನಯನತಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಮೊದಲು ಅವರು ಕಂಡಿರದಂತಹ ವಿಚಿತ್ರವಾದ ಲುಕ್‌ನಲ್ಲಿ ಅವರನ್ನು ನೋಡಬಹುದು ಎಂದು ಸಿನಿಮಾ ತಂಡ ಹೇಳಿಕೊಂಡಿದೆ.

ವಿಶೇಷ ಎಂದರೆ ಈ ಸಿನಿಮಾದಲ್ಲಿ ನಯನತಾರಾ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಹಳ್ಳಿ ಹುಡುಗಿ ರೀತಿಯ ಮೇಕಪ್‌, ಗದ್ದೆಯಲ್ಲಿ ಓಡಾಡುವ ಝಲಕ್‌, ಆಗಾಗ ಬಂದು ಕಾಡುವ ದೆವ್ವ ಎಲ್ಲವೂ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ADVERTISEMENT

ಕೆ.ಎಂ. ಸರ್ಜುನ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಯನತಾರಾ ಅವರೊಂದಿಗೆ ಕಲೈಯರಸನ್‌, ಯೋಗಿ ಬಾಬು ಕೂಡ ನಟಿಸಿದ್ದಾರೆ. ಕೋಟಪಾಡಿ ಜೆ.ರಾಜೇಶ್‌ ಅವರ ನಿರ್ಮಾಣವಿದೆ.

ಜನವರಿ 5ರಂದು ಟೀಸರ್ ಬಿಡುಗಡೆಯಾಗಿತ್ತು.ಇದನ್ನು ನೋಡಿದ ಲಕ್ಷಾಂತರ ಜನರು ನಯನತಾರಾ ಅವರ ಭಿನ್ನವಾದ ಅಭಿವ್ಯಕ್ತಿಯನ್ನು ಕಾಣಲು ಕಾತರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.