ADVERTISEMENT

ಎಐ ಆಧಾರಿತ ಸಿನಿಮಾದಲ್ಲಿ ನಟಿಸಲಿರುವ ಅಜಯ್‌ ದೇವಗನ್

ಪಿಟಿಐ
Published 20 ಜನವರಿ 2026, 7:32 IST
Last Updated 20 ಜನವರಿ 2026, 7:32 IST
<div class="paragraphs"><p>ನಟ ಅಜಯ್‌&nbsp;ದೇವಗನ್</p></div>

ನಟ ಅಜಯ್‌ ದೇವಗನ್

   

ಬಾಲಿವುಡ್‌ ನಟ ಅಜಯ್ ದೇವಗನ್ ಮತ್ತು ನಿರ್ಮಾಪಕ ಡ್ಯಾನಿಶ್ ದೇವಗನ್ ಅವರ ಲೆನ್ಸ್ ವಾಲ್ಟ್ ಸ್ಟುಡಿಯೋಸ್‌ ಅಡಿ ‘ಬಾಲ್ ತಾನಾಜಿ’ ಎಂಬ ಎಐ ಸಿನಿಮಾ ನಿರ್ಮಾಣವಾಗಲಿದೆ ಎಂದು ಸೋಮವಾರ ಘೋಷಿಸಿದ್ದಾರೆ.

ಓಂ ರಾವತ್ ನಿರ್ದೇಶನದ ಅಜಯ್ ದೇವಗನ್ ಅಭಿನಯದ 'ತಾನಾಜಿ' ಸಿನಿಮಾ 2020ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಧಿಕ ಹಣ ಸಂಗ್ರಹಿಸಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ADVERTISEMENT

‌’ಬಾಲ್ ತಾನಾಜಿ’ಯು ಲೆನ್ಸ್ ವಾಲ್ಟ್ ಸ್ಟುಡಿಯೋಸ್‌ನ ಮೊದಲ ಎಐ ಸಿನಿಮಾವಾಗಲಿದೆ. ಕಥೆ ಹೇಳುವ ಸಾಂಪ್ರದಾಯಿಕ ಗಡಿಗಳನ್ನು ಮೀರದಂತೆ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ವಿಭಿನ್ನ ಕಥಾ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ. ‘ಬಾಲ್ ತಾನಾಜಿ’ ಸಿನಿಮಾ ಭವಿಷ್ಯ ಸೃಷ್ಟಿಸಲಿದೆ’ ಎಂದು ಅಜಯ್‌ ದೇವಗನ್ ಹೇಳಿದ್ದಾರೆ.

‘ತಂತ್ರಜ್ಞಾನದ ಮೂಲಕ ನಿರೂಪಣೆಯನ್ನು ವಿಕಸನಗೊಳಿಸುವಲ್ಲಿ ಜನರೇಟಿವ್ ಎಐ ಹೆಚ್ಚು ಸಹಕಾರಿಯಾಗಿದೆ. ಇದು ಹೊಸ ಯುಗದ ಪ್ರೇಕ್ಷಕರನ್ನು ತಲುಪುವಲ್ಲಿ ಲೆನ್ಸ್ ವಾಲ್ಟ್ ಸ್ಟುಡಿಯೋಸ್‌ನ ಮೊದಲ ಹೆಜ್ಜೆಯಾಗಲಿದೆ’ ಎಂದು ಸಂಸ್ಥೆಯ ಸಿಇಓ ಡ್ಯಾನಿಶ್ ದೇವಗನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.