ಇಷ್ಕ್ ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಕಾಜೋಲ್
ಚಿತ್ರ: ಇನ್‌ಸ್ಟಾಗ್ರಾಂ
ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ನಟಿ ಕಾಜೋಲ್ ನಟನೆಯ ‘ಇಷ್ಕ್‘ ಸಿನಿಮಾ 28ನೇ ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆ ಅಜಯ್ ದೇವಗನ್ ಅವರು ಕಾಜೋಲ್ ಹಾಗೂ ಕುಟುಂಬ ಸದಸ್ಯರ ಜೊತೆಗಿನ ಫೋಟೊ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಅಜಯ್ ದೇವಗನ್ ಅವರು ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 3 ಸ್ಲೈಡ್‌ಗಳ ಫೋಟೊ ಹಂಚಿಕೊಂಡಿದ್ದಾರೆ. ಅದರ ಮೊದಲ ಚಿತ್ರದಲ್ಲಿ ಅಜಯ್ ಹಾಗೂ ಕಾಜೋಲ್ ಇರುವ ಚಿತ್ರವಿದೆ ಅದಕ್ಕೆ ‘ಇಷ್ಕ್ ಹುವಾ‘ ಎಂದು ಬರೆದಿದ್ದಾರೆ.
ಎರಡನೇ ಸ್ಲೈಡ್‌ನಲ್ಲಿ ಅಜಯ್ ಹಾಗೂ ಕಾಜೋಲ್ ಅವರ ಮದುವೆ ಚಿತ್ರವಿದೆ. ಅದಕ್ಕೆ, ‘ಕೈಸೆ ಹುವಾ‘ ಎಂದು ಬರೆದುಕೊಂಡಿದ್ದಾರೆ. ಇನ್ನೂ ಮೂರನೇ ಸ್ಲೈಡ್‌ನಲ್ಲಿ ಅಜಯ್, ಕಾಜೋಲ್ ಹಾಗೂ ಅವರ ಮಕ್ಕಳಾದ ನೈಸಾ ದೇವಗನ್ ಮತ್ತು ಯುಗ್ ದೇವಗನ್ ಇರುವ ಸುಂದರ ಕುಟುಂಬದ ಚಿತ್ರವಿದೆ. ಇದಕ್ಕೆ ‘ಅಚ್ಚಾ ಹುವಾ’ ಎಂದು ಬರೆದುಕೊಂಡಿದ್ದಾರೆ.
ಇಷ್ಕ್ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾ ಕೂಡ ನಟಿಸಿದ್ದರು. ಈ ಸಿನಿಮಾ ನವೆಂಬರ್ 28, 1997ರಂದು ಬಿಡುಗಡೆಯಾಗಿತ್ತು. ಇಂದ್ರ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.