‘ಸನ್ ಆಫ್ ಸರ್ದಾರ್ 2‘ ಚಿತ್ರದ ಪೋಸ್ಟರ್
ಎಕ್ಸ್ ಖಾತೆ @ajaydevgn
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್ 2‘ ಸಿನಿಮಾವು ಇದೇ ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಿತ್ರದ ಹಾಡಿನ ವಿಡಿಯೊವನ್ನು ಹಂಚಿಕೊಂಡಿರುವ ಅಜಯ್ ದೇವಗನ್, 'ಬಹುನಿರೀಕ್ಷಿತ ಸಿನಿಮಾ ನಿಮ್ಮ ಮುಂದೆ ಜುಲೈ 25ರಂದು ಬರಲಿದೆ. ನಿಮ್ಮ ಕಾಯುವಿಕೆ ಇನ್ನೂ ಮುಗಿದಿದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಮೃಣಾಲ್ ಠಾಗೂರ್, ಸಂಜಯ್ ದತ್, ರವಿ ಕಷ್ಣನ್, ಮುಕುಲ್ ದೇವ್, ಸಂಜಯ್ ಮಿಶ್ರಾ ಸೇರಿದಂತೆ ಅನೇಕರು ನಟಿಸಿದ್ದಾರೆ.
ಈ ಚಿತ್ರಕ್ಕೆ ವಿಜಯ್ ಕುಮಾರ್ ಅರೋರಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಸೀಮ್ ಬಜಾಜ್ ಅವರ ಛಾಯಾಗ್ರಹಣವಿದ್ದು, ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಎನ್.ಆರ್ ಪಚಿಸಿಯಾ ಮತ್ತು ಪ್ರವೀಣ್ ತಲ್ರೇಜಾ ಅವರನ್ನು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರ ಹಿಂದಿ, ತೆಲುಗು, ತಮಿಳು, ಉರ್ದು, ತುಳು, ಅಸ್ಸಾಮಿ ಸೇರಿದಂತೆ ಒಡಯಾ ಭಾಷೆಗಳಲ್ಲಿ ತೆರೆ ಕಾಣಲಿದೆ. ‘ಸನ್ ಆಫ್ ಸರ್ದಾರ್ ‘ 2012ರಲ್ಲಿ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.