ADVERTISEMENT

ಮಗನ ಫೋಟೊ ಹಂಚಿಕೊಂಡ ತಮಿಳು ನಟ ಅಜಿತ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 12:57 IST
Last Updated 31 ಅಕ್ಟೋಬರ್ 2021, 12:57 IST
ಅಜಿತ್‌
ಅಜಿತ್‌   

ತಮಿಳಿನ ಖ್ಯಾತ ನಟ ಅಜಿತ್‌ ಕುಮಾರ್‌ ಅವರು ತಮ್ಮಮಗ ಅದ್ವಿಕ್‌ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಜಿತ್‌ ತಮ್ಮ ಸ್ಟೆಟಸ್‌ನಲ್ಲಿ ಮಗನೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಮಗನ ತಲೆಗೆ ದೊಡ್ಡ ಹೆಲ್ಮೆಟ್‌ ಹಾಕಿ ಮುಗುಳ್ನಗೆ ಬೀರಿದ್ದಾರೆ. ಆ ಮೂಲಕ ಅಜಿತ್ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಇನ್ನು ಕೆಲವರು ಇದು ’ವಾಲಿವೈ’ ಸಿನಿಮಾದ ಪ್ರಚಾರ ಎಂದು ಹೇಳುತ್ತಿದ್ದಾರೆ.ಅಭಿಮಾನಿಗಳಂತೂಅದ್ವಿಕ್‌ ಫೋಟೊ ನೋಡಿ ಖುಷಿ ಪಟ್ಟಿದ್ದಾರೆ. ಇದು’ಮರಿ ಸಿಂಹ’ ಎಂಬ ಕಮೆಂಟ್‌ಗಳನ್ನು ಬರೆಯುತ್ತಿದ್ದಾರೆ.

ADVERTISEMENT

ಅಜಿತ್ ನಟನೆಯ 'ವಾಲಿಮೈ' ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಈ ಚಿತ್ರವನ್ನುಎಚ್. ವಿನೋತ್‌ ನಿರ್ದೇಶನ ಮಾಡಿದ್ದಾರೆ.

ವಾಲಿಮೈನಲ್ಲಿ ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ. ತೆಲುಗು ನಟ ಕಾರ್ತಿಕೇಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ಸುಮಿತ್ರಾ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.