ADVERTISEMENT

ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್‌: ನಟ ಅಲ್ಲು ಅರ್ಜುನ್ ಕೃತಜ್ಞತೆ

ಪಿಟಿಐ
Published 14 ಜನವರಿ 2022, 12:35 IST
Last Updated 14 ಜನವರಿ 2022, 12:35 IST
ಅಲ್ಲು ಅರ್ಜುನ್
ಅಲ್ಲು ಅರ್ಜುನ್   

ಮುಂಬೈ: ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಅನುಯಾಯಿಗಳ ಸಂಖ್ಯೆ 15 ಮಿಲಿಯನ್ (1.5 ಕೋಟಿ) ಗಡಿ ದಾಟಿದ್ದು, ತೆಲುಗು ಚಿತ್ರರಂಗದ ಸ್ಟಾರ್ ಅಲ್ಲು ಅರ್ಜುನ್ ಶುಕ್ರವಾರ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

39 ವರ್ಷದ ನಟ ಸದ್ಯ ಇತ್ತೀಚಿಗಷ್ಟೇ ಬಿಡುಗಡೆಯಾದ 'ಪುಷ್ಪಾ: ದಿ ರೈಸ್' ಸಿನಿಮಾದ ಅದ್ಭುತ ಯಶಸ್ಸಿನ ಗುಂಗಿನಲ್ಲಿದ್ದಾರೆ. ಫೋಟೊ ಹಂಚಿಕೆ ಅಪ್ಲಿಕೇಶನ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಅಲ್ಲು ಅರ್ಜುನ್, ಮೈಲುಗಲ್ಲು ಸಾಧಿಸಿದ್ದಾರೆ.

'15 ಮಿಲಿಯನ್. ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು. ಎಂದೆಂದಿಗೂ ಕೃತಜ್ಞತೆಗಳು ಮತ್ತು ಸಂಕ್ರಾಂತಿಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ADVERTISEMENT

2003ರಲ್ಲಿ ಗಂಗೋತ್ರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಅದಾದ ಬಳಿಕ ಸುಕುಮಾರ್ ನಿರ್ದೇಶನದ ಆರ‍್ಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಚಿರಪರಿಚಿತರಾದರು. ತಮ್ಮ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಬನ್ನಿ, ದೇಶಮುದುರು, ಪರುಗು ಮತ್ತು ಅಲಾ ವೈಕುಂಠಪುರಮುಲೊ ನಂತಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪುಷ್ಪ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಎರಡನೇ ಭಾಗದ 'ಪುಷ್ಪ: ದಿ ರೂಲ್' ಶೀರ್ಷಿಕೆಯ ಚಿತ್ರೀಕರಣವನ್ನು ಅಲ್ಲು ಅರ್ಜುನ್ ಮಾರ್ಚ್‌ನಿಂದ ಪ್ರಾರಂಭಿಸಲಿದ್ದಾರೆ. ಅವರ ಮುಂಬರುವ ಪ್ರಾಜೆಕ್ಟ್‌ಗಳಿಗಾಗಿ ಅವರು ನಿರ್ಮಾಪಕರಾದ ಎ.ಆರ್. ಮುರುಗೋದಾಸ್ ಮತ್ತು ಪ್ರಶಾಂತ್ ನೀಲ್ ಅವರೊಂದಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.