ಅಬುಧಾಬಿ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ನಟ ಅಲ್ಲು ಅರ್ಜುನ್
ಅಬುಧಾಬಿ: ತಮಿಳು ನಟ ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಯುಎಇಗೆ ಭೇಟಿ ನೀಡಿದ್ದರು. ಈ ವೇಳೆ ಅಬುಧಾಬಿಯಲ್ಲಿನ ಬಿಎಪಿಎಸ್‌ನ ಹಿಂದೂ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ದೇಗುಲದ ಆಡಳಿತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ.
ಕಪ್ಪು ಪ್ಯಾಂಟ್, ಶರ್ಟ್ ಧರಿಸಿರುವ ಅಲ್ಲು ಅರ್ಜುನ್, ದೇಗುಲದ ಒಳಾಂಗಣದಲ್ಲಿ ಸುತ್ತಾಡಿದ್ದಾರೆ. ಅವರೊಂದಿಗೆ ದೇಗುಲದ ಆಡಳಿತ ಮಂಡಳಿ ಸದಸ್ಯರು ಜತೆಯಾಗಿದ್ದು, ವಾಸ್ತುಶಿಲ್ಪದ ಬಗ್ಗೆ ವಿವರಿಸಿದ್ದಾರೆ. ಬಳಿಕ ದೇಗುಲದ ಅರ್ಚಕರು ಅರ್ಜುನ್ ಅವರಿಗೆ ಹೂವಿನ ಹಾರ ಹಾಕಿ ಉಡುಗೊರೆ ನೀಡುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.
ಇತ್ತೀಚೆಗೆ ನಟ ರಜನಿಕಾಂತ್, ಚಿರಂಜೀವಿ ಕೂಡ ಅಬುಧಾಬಿಯ ಈ ದೇಗುಲಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.